alex Certify BIG NEWS: ರಾಯಚೂರಿನಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಪತ್ತೆ; 100ಕ್ಕೂ ಹೆಚ್ಚು ಹಂದಿಗಳು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಯಚೂರಿನಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಪತ್ತೆ; 100ಕ್ಕೂ ಹೆಚ್ಚು ಹಂದಿಗಳು ಸಾವು

ರಾಯಚೂರು: ಕಳೆದ ತಿಂಗಳು ಕೇರಳದ ಕನಿಚಾರ್ ಗ್ರಾಮದಲ್ಲಿ ಪತ್ತೆಯಾಗಿದ್ದ ಆಫ್ರಿಕನ್ ಸ್ವೈನ್ ಫ್ಲೂ ಇದೀಗ ರಾಜ್ಯದಲ್ಲಿಯೂ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ರಾಯಚೂರಿನಲ್ಲಿ ಆಫ್ರಿಕನ್ ಸ್ವೈ ಫ್ಲೂ ಪತ್ತೆಯಾಗಿದ್ದು, 100ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ.

ರಾಯಚೂರಿನ ಲಿಂಗಸಗೂರು ತಾಲೂಕಿನ ಹಟ್ಟಿಯಲ್ಲಿ ಹಂದಿಗಳಲ್ಲಿ ಈ ಜ್ವರ ಕಾಣಿಸಿಕೊಂಡಿದ್ದು, ಹಂದಿಗಳ ಸಾವಿಗೆ ಕರಣವಾಗಿದೆ. ಇದು ಸ್ಥಳೀಯರಲ್ಲಿಯೂ ಆತಂಕ ಮೂಡಿಸಿದೆ. ಹಂದಿಗಳ ಸಾವಿಗೆ ಕಾರಣ ಪತ್ತೆ ಮಾಡಲು ಪರೀಕ್ಷೆ ನಡೆಸಿದಾಗ ಆಫ್ರಿಕನ್ ಸ್ವೈನ್ ಫ್ಲೂ ಎಂಬುದು ದೃಢಪಟ್ಟಿದೆ.

ದುರಗಪ್ಪ ಎಂಬುವವರಿಗೆ ಸೇರಿದ ಖಾಸಗಿ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಸೈನ್ ಫ್ಲೂ ಪತ್ತೆಯಾಗಿದ್ದು, ಹಂದಿ ಸಾಕಾಣಿಕೆ ಕೇಂದ್ರದ ಒಂದು ಕಿ.ಮೀ ವ್ಯಾಪ್ತಿ ಪ್ರದೇಶವನ್ನು ರೋಗಪೀಡಿತ ಎಂದು ಘೋಷಿಸಲಾಗಿದೆ. 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತವಲಯ ಎಂದು ಘೋಷಿಸಲಾಗಿದೆ.

ಆಫ್ರಿಕನ್ ಹಂದಿ ಜ್ವರ ಹಂದಿಗಳಲ್ಲಿ ಮಾತ್ರ ಕಂಡು ಬರುತ್ತದೆ ಮನುಷ್ಯನಿಗೆ ಹರಡುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ ಸುತ್ತಮುತ್ತಲ ವಾತಾವರನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...