alex Certify ಸೋದರತ್ತೆ ಕಾಟಕ್ಕೆ ಬೇಸತ್ತ ಅಳಿಯ ವಿಷ ಸೇವಿಸಿ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋದರತ್ತೆ ಕಾಟಕ್ಕೆ ಬೇಸತ್ತ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

ರಾಯಚೂರು: ಸೋದರತ್ತೆಯ ಕಾಟಕ್ಕೆ ಮನನೊಂದ ಅಳಿಯನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಲಿಗೇಪ್ಪ (20) ಮೃತ ಯುವಕ. ಜಮೀನು ವಿಚಾರವಾಗಿ ಸೋದರತ್ತೆ ಹಾಗೂ ಹುಲಿಗೇಪ್ಪನ ನಡುವೆ ಆಗಾಗಾ ಜಗಳವಾಗುತ್ತಿತ್ತು. ಅತ್ತೆ ಹುಲಿಗೇಪ್ಪಗೆ ಬೆದರಿಕೆಯನ್ನೂ ಹಾಕಿದ್ದರು.

ಇದರಿಂದ ಮನನೊಂದ ಹುಲಿಗೇಪ್ಪ ಡೆತ್ ನೋಟ್ ಬರೆದಿಟ್ಟು ವಿಷ ಸೇವೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ಅತ್ತೆ ಲಕ್ಷ್ಮೀದೇವಿ, ಅತ್ತೆ ಮಗಳು ಅನುರಾಧ, ಮಹಾದೇವಿ, ಅನಿಲ್ ಎಂಬುವವರ ಹೆಸರು ಉಲ್ಲೇಖಿಸಿದ್ದಾನೆ. ನನ್ನ ಸಾವಿಗೆ ನನ್ನ ಅತ್ತೆ ಲಕ್ಷ್ಮೀದೇವಿ ಹಾಗೂ ಆಕೆಯ ಮಕ್ಕಳೇ ಕಾರಣ ಎಂದು ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.

ಸಿರಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...