ರಾಯಚೂರು: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿದ್ದು, ಗಲಾಟೆ ಬಿಡಿಸಲೆಂದು ಹೋದ ವ್ಯಕ್ತಿಯನ್ನೇ ಹೊಡೆದು ಸಾಯಿಸಿರುವ ಘಟನೆ ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಮೂರು ಮೈಲು ಕ್ಯಾಂಪ್ ಬಳಿ ನಡೆದಿದೆ.
ಯುವಕರ ಮಧ್ಯೆ ಗಲಾಟೆ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ವೃದ್ಧ ವೀರ ಬಸಪ್ಪ ಎಂಬುವವರು ಗಲಾಟೆ ಬಿಡಿಸಲು ಹೋಗಿದ್ದಾರೆ. ಗಲಾಟೆ ಬಿಡಿಸಲು ಹೋಗಿದ್ದ ವೀರ ಬಸಪ್ಪ ಅವರ ಕೆನ್ನೆಗೆ ಮಹೇಶ್ ಎಂಬಾತ ಬಾರಿಸಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದ ವೀರ ಬಸಪ್ಪ ಸಾವನ್ನಪ್ಪಿದ್ದಾರೆ.
ವೀರ ಬಸಪ್ಪ ಕುಟುಂಬದವರು ಯುವಕರ ವಿರುದ್ಧ ಕೊಲೆ ಆರೋಪದಡಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಸಿಂಧನೂರು ನಗರ ಠಾಣೆ ಪೊಲಿಸರು ಓರ್ವ ಅಪ್ರಾಪ್ತ ಸೇರಿ ಮುವರನ್ನು ವಶಕ್ಕೆ ಪಡೆದಿದ್ದಾರೆ.
ಮಹೇಶ್, ಪರಶುರಾಮ್ ಹಾಗೂ ಅಪ್ರಾಪ್ತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.