
ರಾಯಚೂರು: ಹೋಟೆಲ್ ನಲ್ಲಿ ಹುಟ್ಟೆತುಂಬ ಬಿರಿಯಾನಿ ತಿಂದ ಇಬ್ಬರು ಖದೀಮರು ಬಳಿಕ 500 ರೂ ಮುಖಬೆಲೆಯ ನಕಲಿ ನೋಟು ಚಲಾಯಿಸಿ ಪರಾರಿಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಬಿರಿಯಾನಿ ಹೋಟೆಲ್ ಮಾಲೀಕ ಅನುಮಾನ ಬಂದು ಕೊಟ್ಟ 500 ರೂ ನೋಟನ್ನು ಮತ್ತೆ ಪರಿಶೀಲಿಸಿದಾಗ ಅದು ನಕಲಿ ನೋಟು ಎಂಬುದು ಗೊತ್ತಾಗಿದೆ. ನೋಟ್ ನಲ್ಲಿ ಚಿಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುಂದ್ರಿಸಲಾಗಿತ್ತು. ಹೋಟೆಲ್ ಮಾಲೀಕ ತಕ್ಷಣ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾರ್ಯಾಚರಣೆ ನಡೆಸಿಇದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಜುನಾಥ್ ಹಾಗೂ ರಮೇಶ್ ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.