ರಾಯಚೂರು: ದರ್ವೇಶ್ ಗ್ರೂಪ್ ಕಂಪನಿಯಿಂದ ಬಹುಕೋಟಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ನಗರದ ಮನೆಯಲ್ಲಿ 2 ಕೋಟಿ ರೂ ಹಣವನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಡಿದ್ದಾರೆ.
ವಂಚನೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಶಾಮೀದ್, ಮೋಸಿನ್, ಅಜರ್ ಅಲಿ ಬಂಧಿತರು. ವಿಚಾರಣೆ ವೇಳೆ ಆರೋಪಿಗಳು ತಮಗೆ ಪರಿಚಯವಿದ್ದ ಓರ್ವ ವ್ಯಕ್ತಿಯ ಮನೆಯಲ್ಲಿ 2 ಕೋಟಿ ಹಣ ಇರುವುದಾಗಿ ಬಯಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರಿನ ಎಲ್.ಬಿ.ಎಸ್.ನಗರದಲ್ಲಿರುವ ಓರ್ವ ವ್ಯಕ್ತಿಯ ಮನೆ ಮೇಲೆ ದಳಿ ನಡೆಸಿ ಶೋಧ ನಡೆಸಲಾಗಿದ್ದು, ಈ ವೇಳೆ 2 ಕೋಟಿ ಹಣ ಪತ್ತೆಯಾಗಿದೆ.
ಕಂಪನಿ ಮಾಲೀಕ ಮೊಹಮ್ಮದ್ ಹುಸೇನ್ ಸುಜಾ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ರಾಯಚೂರು ನಗರದ ಹೈದರಾಬಾದ್ ರಸ್ತೆಯಲ್ಲಿರುವ ದರ್ವೇಶ್ ಗ್ರೂಪ್ ಕಂಪನಿ ಶೇ.10 ಹಾಗೂ ಹತ್ತಕ್ಕಿಂತ ಹೆಚ್ಚಿನ ದರದಲ್ಲಿ ಬಡ್ಡಿ ನೀಡುವುದಾಗಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಬಹುಕೋಟಿ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ. ದರ್ವೇಶ್ ಕಂಪನಿಯ ಮಾಲೀಕ ಮೊಹಮ್ಮದ್ ಹುಸೇನ್ ಸುಜಾ, ಸೈಯ್ಯದ್ ಮಸ್ಕಿನ್, ಹಾಗೂ ಸಯ್ಯದ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.