ರಾಯಚೂರು: ರಸ್ತೆ ದಾಟುವಾಗ ಎಷ್ಟೇ ಎಚ್ಚರವಹಿಸಿದರೂ ಕಡಿಮೆಯೇ. ರಸ್ತೆ ದಾಟುತ್ತಿದ್ದ ವೇಳೆ ಸರ್ಕಾರಿ ಬಸ್ ಹರಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಸೇತುವೆ ಬಳಿ ನಡೆದಿದೆ.
72 ವರ್ಷದ ದುರುಗಮ್ಮ ಮೃತರು. ಜಾಲಹಳ್ಳಿ ಗ್ರಾಮದ ನಿವಾಸಿ ದುರುಗಮ್ಮ ತಿಂಥಿಣಿ ಸೇತುವೆ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗಾವಿ ಬಂದ ಸರ್ಕಾರಿ ಬಸ್ ವೃದ್ಧೆಗೆ ಡಿಕ್ಕಿಹೊಡೆದು ವೃದ್ಧೆಯ ಮೇಲೆ ಹರಿದು ಹೋಗಿದೆ.
ಸ್ಥಳದಲ್ಲೇ ವೃದ್ಧೆ ಸಾವನ್ನಪ್ಪಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.