alex Certify ಮಣಿಪುರದಿಂದ ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ್’ ಯಾತ್ರೆ ಆರಂಭ : ಬಸ್, ಕಾಲ್ನಡಿಗೆಯಲ್ಲಿ 67 ದಿನ ಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣಿಪುರದಿಂದ ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ್’ ಯಾತ್ರೆ ಆರಂಭ : ಬಸ್, ಕಾಲ್ನಡಿಗೆಯಲ್ಲಿ 67 ದಿನ ಸಂಚಾರ

ನಿನ್ನೆಯಿಂದ ( ಜ.14) ಮಣಿಪುರದಿಂದ ‘ಭಾರತ್ ಜೋಡೋ ನ್ಯಾಯ್’ ಯಾತ್ರೆ ಆರಂಭವಾಗಿದ್ದು, ಬಸ್, ಕಾಲ್ನಡಿಗೆಯಲ್ಲಿ 67 ದಿನ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಸಂಚರಿಸಲಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್
ಹಮ್ಮಿಕೊಂಡಿರುವ 67 ದಿನಗಳ ‘ಭಾರತ್   ಜೋಡೋ ನ್ಯಾಯ ಯಾತ್ರೆ’ಗೆ ಭಾನುವಾರ ಮಣಿಪುರದ ಫೌಬಾಲ್ನಲ್ಲಿ   ಚಾಲನೆ ಸಿಕ್ಕಿದೆ.  ಈ ಯಾತ್ರೆಗೆ ರಾಹುಲ್ ಗಾಂಧಿ ಮತ್ತು  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಔಪಚಾರಿಕ ಚಾಲನೆ ನೀಡಿದ್ದಾರೆ.

ನಂತರ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ ನಾನು ಮೊದಲ ಬಾರಿಗೆ ಭಾರತದ ಆಡಳಿತ ವ್ಯವಸ್ಥೆ ಕುಸಿದ ರಾಜ್ಯಕ್ಕೆ ಬಂದಿದ್ದೇನೆ. ಅದನ್ನು ನಾವು ಮಣಿಪುರ ಎಂದು ಕರೆಯುತ್ತೇವೆ. ಇಲ್ಲಿ ಹಿಂಸೆ ನಡೆಯುತ್ತಿದ್ದರೂ ಪ್ರಧಾನಿ ಬಂದಿಲ್ಲ ಎಂದು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.ಮಣಿಪುರ ರಾಜ್ಯದಲ್ಲಿ ಲಕ್ಷಾಂತರ ಮಂದಿ ನಷ್ಟ ಅನುಭವಿಸಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ಈ ಜನರ ಕಣ್ಣೀರು ಒರೆಸಲು ಭೇಟಿ ನೀಡಲೇ ಇಲ್ಲ. ನಿಮ್ಮ ಕೈ ಹಿಡಿಯಲಿಲ್ಲ. ನಿಮಗೆ ಭರವಸೆ ತುಂಬಲಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಈ ಯಾತ್ರೆ 337 ವಿಧಾನಸಭಾ ಕ್ಷೇತ್ರಗಳನ್ನು ವ್ಯಾಪಿಸಿ 110 ಜಿಲ್ಲೆಗಳನ್ನು ಒಳಗೊಳ್ಳುವ ಮೂಲಕ 6,713 ಕಿಮೀ ದೂರವನ್ನು ಕ್ರಮಿಸಲಿದೆ. 67 ದಿನಗಳ ನಂತರ ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...