
ರಕ್ಷಾ ಬಂಧನದ ಸಂಭ್ರಮದ ಸಂದರ್ಭದಲ್ಲಿ ಸಹೋದರಿ ಪ್ರಿಯಾಂಕಾ ವಾದ್ರಾ ಜೊತೆಗೆ ಬಾಲ್ಯದಿಂದ ಕಳೆದ ಕ್ಷಣಗಳನ್ನು ನೆನೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
“ನನ್ನ ಸಹೋದರಿಯ ಪ್ರೀತಿ ಹಾಗೂ ಬಾಂಧವ್ಯ ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿದೆ. ನಾವಿಬ್ಬರೂ ಪರಸ್ಪರರ ಸ್ನೇಹಿತರು ಹಾಗೂ ರಕ್ಷಕರು. ರಕ್ಷಾ ಬಂಧನದ ಸಂಭ್ರಮದ ಪ್ರಯುಕ್ತ ಎಲ್ಲರಿಗೂ ಹೃತ್ಪೂರ್ವಕ ಶುಭಕಾಮನೆಗಳು” ಎಂದು ರಾಹುಲ್ ಗಾಂಧಿ ಚಿತ್ರದೊಂದಿಗೆ ಕ್ಯಾಪ್ಷನ್ ಹಾಕಿದ್ದಾರೆ.
BIG NEWS: ಆಫ್ಘನ್ ಗೆದ್ದು ಬೀಗಿದ್ದ ತಾಲಿಬಾನಿಗಳಿಗೆ ಬಿಗ್ ಶಾಕ್; ಯುದ್ಧಕ್ಕೆ ರೆಡಿ ಎಂದ ಪಂಜಶೀರ್ ಬಂಡುಕೋರ ನಾಯಕ
ಇದಕ್ಕೂ ಮುನ್ನ ಓಣಂ ಹಬ್ಬದ ಶುಭಾಶಯ ಕೋರಿದ ರಾಹುಲ್, “ಸಮಾನತೆ ಮತ್ತು ಐಕ್ಯತೆಯ ಸ್ಪೂರ್ತಿಯನ್ನು ಓಣಂ ಆಚರಿಸುತ್ತದೆ. ಈ ಹಬ್ಬವು ಕೇರಳದ ಐಕ್ಯತೆಯ ಸ್ಪೂರ್ತಿಯನ್ನು ಪ್ರತಿನಿಧಿಸುತ್ತದೆ. ಎಲ್ಲರಿಗೂ ಸಂತಸ ಹಾಗೂ ಸುರಕ್ಷಿತ ಓಣಂ” ಎಂದು ವಿಡಿಯೋವೊಂದನ್ನು ಶೇರ್ ಮಾಡಿ, ಓಣಂ ಹಬ್ಬದ ಶುಭಾಶಯ ತಿಳಿಸಿದ್ದಾರೆ.
https://www.instagram.com/p/CS3NIxFBiJi/?utm_source=ig_web_copy_link