ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಮತ್ತು ವೆಂಕಟೇಶ್ ಪ್ರಸಾದ್ ಸ್ಪರ್ಧಿಸಿದ್ದಾರೆ…! ಅಂದ ಹಾಗೆ, ಇವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರಲ್ಲ.
ಬೆಂಗಳೂರಿನ ರಾಜಾಜಿನಗರದ ನಿವಾಸಿ ರಾಹುಲ್ ಗಾಂಧಿ ಎನ್. ಅವರು ಧಾರವಾಡ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ 51 ವರ್ಷ ವರ್ಷದ ಎನ್. ರಾಹುಲ್ ಗಾಂಧಿ ಪಿಯುಸಿವರೆಗೆ ಓದಿದ್ದು ಸ್ವಂತ ಉದ್ಯೋಗಿಯಾಗಿದ್ದಾರೆ. ಅವರ ಬಳಿ 35.35 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಇದೆ. ಅವರು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಶುಕ್ರವಾರ ಧಾರವಾಡ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರಿನ ಪ್ರವಾಸಿ ಮಾರ್ಗದರ್ಶಿ ವೆಂಕಟೇಶ ಪ್ರಸಾದ್ ಇಂಡಿಯನ್ ಲೇಬರ್(ಅಂಬೇಡ್ಕರ್, ಪುಲೆ) ಪಕ್ಷದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. 45 ವರ್ಷದ ವೆಂಕಟೇಶ ಪ್ರಸಾದ್ ಅವರ ಹೆಸರಲ್ಲಿ ಯಾವುದೇ ಚರಾಸ್ತಿ ಇಲ್ಲ.