ಕೊಲ್ಲಂ: ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿದ್ದಾರೆ.
ಕೇರಳದ ಸಂಸದರಾಗಿರುವ ಅವರು, ಮೀನುಗಾರರನ್ನು ಭೇಟಿಮಾಡಿ ಸಂವಾದ ನಡೆಸಿದ್ದು, ಅವರ ಸಮಸ್ಯೆಗಳ ಆಲಿಸಿ ನಿವಾರಣೆಗೆ ಕ್ರಮ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮೀನುಗಾರರೊಂದಿಗೆ ಸಮೀಪದ ಸಮುದ್ರಕ್ಕೆ ತೆರಳಿ ಈಜಾಡಿದ್ದಾರೆ.