
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರಿಗೆ ರಾಹುಲ್ ಗಾಂಧಿ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರಂತೆ. ಸ್ವತಃ ರಾಹುಲ್ ಗಾಂಧಿಯವರೇ ಪತ್ರಿಕೆಯೊಂದರ ಸಂದರ್ಶನದ ವೇಳೆ ಈ ವಿಷಯ ತಿಳಿಸಿದ್ದಾರೆ.
ಇಟಲಿ ಮೂಲದ ಪತ್ರಿಕೆಗೆ ಸಂದರ್ಶನ ನೀಡಿರುವ ರಾಹುಲ್ ಗಾಂಧಿ ಈ ವಿಷಯ ತಿಳಿಸಿದ್ದು, ಅವರ ಸಹೋದರಿ ಪ್ರಿಯಾಂಕ, ಇಟಲಿ ಅಜ್ಜಿಗೆ ಮೆಚ್ಚಿನ ಮೊಮ್ಮಗಳಾಗಿದ್ದರಂತೆ.
ಇನ್ನು ಈ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ಟೀಕೆ ಮಾಡಿರುವ ಅವರು, ಭಾರತದಲ್ಲಿ ಪ್ರಜಾಪ್ರಭುತ್ವ ಕೊನೆಯಾಗುತ್ತಿದೆ ಎಂದು ಹೇಳಿದ್ದಾರೆ.