ಉಡುಪಿ: ಮೀನುಗಾರರ ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಉಚ್ಚಿಲದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರಿನ ಫಿಶರ್ ಕಾಲೇಜನ್ನು ವಿಶ್ವವಿದ್ಯಾಲಯ ಮಾಡಬೇಕು. ಸೀ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಬೇಕು. ರೈತರಿಗೆ ಸಿಗುವ ಎಲ್ಲಾ ಸಹಕಾರ ಮೀನುಗಾರರಿಗೂ ಸಿಗಬೇಕೆಂದು ಮಹಿಳೆಯೊಬ್ಬರು ಮನವಿ ಮಾಡಿದ್ದಾರೆ.
ದೊಡ್ಡ ಮತ್ತು ಸಣ್ಣ ಮೀನುಗಾರರ ಸ್ಪರ್ಧೆ ಬಗ್ಗೆ ನನಗೆ ಅರಿವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಶ್ರೀಮಂತ ಮೀನುಗಾರರ ಜೊತೆ ಬಡ ಮೀನುಗಾರರು ಸ್ಪರ್ಧಿಸಬೇಕು. ನಾನು ಕೇರಳದಲ್ಲಿ ಮುಂಜಾನೆ 4 ಗಂಟೆಗೆ ಮೀನುಗಾರಿಕೆಗೆ ಹೋಗಿದ್ದೆ. ಮೀನುಗಾರರ ನೋವು ನಲಿವು ನನಗೆ ಗೊತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನೇರವಾದ ಸಂವಾದದಿಂದ ನಮ್ಮಿಬ್ಬರ ಭಾವನೆ ವಿನಿಮಯ ಆಗಿದೆ. ನಿಮ್ಮ ನೋವು ನಲಿವಿನಲ್ಲಿ ಯಾವುದೇ ಕಾಂಪ್ರಮೈಸ್ ಆಗುವುದಿಲ್ಲ ಎಂದು ಮೀನುಗಾರರ ಜತೆ ಸಂವಾದದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.