ಬೆಂಗಳೂರು: ಗಾಯಗೊಂಡ ಮರಿ ಆನೆಗೆ ಚಿಕಿತ್ಸೆ ಕೊಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪತ್ರ ಬರೆದು ಸ್ಪಂದಿಸಿದ್ದಾರೆ.
ನಿಮ್ಮ ಮನವಿ ನನಗೆ ತಲುಪಿದೆ. ನಿಮ್ಮ ಕಳಕಳಿಯನ್ನು ಪ್ರಶಂಶಿಸುತ್ತೇನೆ. ಈಗಾಗಲೇ ಅಧಿಕಾರಿಗಳು ಮರಿ ಆನೆಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಕ್ರೂರ ಪ್ರಾಣಿಗಳ ದಾಳಿಗೆ ಒಳಗಾಗಿ ಮರಿ ಆನೆಗೆ ಗಾಯವಾಗಿದೆ. ಸದ್ಯ ಮರಿ ಆನೆ ತಾಯಿಯ ಹಾಲಿನ ಹಾರೈಕೆಯಲ್ಲಿದೆ. ಈ ಹಂತದಲ್ಲಿ ತಾಯಿಯನ್ನು ಬೇರ್ಪಡಿಸಿ ಚಿಕಿತ್ಸೆ ನೀಡುವುದು ಕಷ್ಟ. ಅಗತ್ಯ ಚಿಕಿತ್ಸೆ ನೀಡಿ ಆರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ತಾಯಿ ಜೊತೆಗೆ ಮರಿ ಆನೆಯನ್ನು ತೀವ್ರ ನಿಗಾವಹಿಸಿ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮರು ಪತ್ರ ಬರೆದಿದ್ದಾರೆ.
ನಾಗರಹೊಳೆ ಸಂರಕ್ಷಿತ ಕಾಡಿನಲ್ಲಿ ಗಾಯಗೊಂಡ ಮರಿ ಆನೆ ನೋಡಿದ್ದ ರಾಹುಲ್ ಗಾಂಧಿ ಅವರು ಮರಿ ಆನೆಯನ್ನು ಕಾಪಾಡುವಂತೆ ನಿನ್ನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅಲ್ಲದೇ ಟ್ವಿಟರ್ ನಲ್ಲಿ ಆನೆ ಫೋಟೋ ಪೋಸ್ಟ್ ಮಾಡಿದ್ದರು.