ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ದೀಪಾವಳಿ ಸಂದೇಶವನ್ನು ಹಂಚಿಕೊಂಡಿದ್ದಾರೆ.
“ಯಾರ ಕಠಿಣ ಪರಿಶ್ರಮ ಭಾರತವನ್ನು ಬೆಳಗಿಸುತ್ತದೆ” ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ. ಸ್ಥಳೀಯ ಕುಶಲಕರ್ಮಿಗಳು ಮತ್ತು ಸಾಂಪ್ರದಾಯಿಕ ಕರಕುಶಲ ಕೆಲಸಗಳಲ್ಲಿ ತೊಡಗಿರುವವರನ್ನು ಅವರ ಸೋದರಳಿಯ ರೈಹಾನ್ ವಾದ್ರಾ ಅವರೊಂದಿಗೆ ಭೇಟಿಯಾಗಿದ್ದಾರೆ.
ಇಬ್ಬರು ವಾಲ್ ಪೇಂಟಿಂಗ್ ಮಾಡಿದ್ದಾರೆ. ದೀಪ ತಯಾರಿಸುವವರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಚಟುವಟಿಕೆಗಳಂತಹ ಕೌಶಲ್ಯದ ಬಗ್ಗೆ ಸೋದರಳಿಯನಿಗೆ ತಿಳಿಸಿದ್ದಾರೆ. ಸಾಂಪ್ರದಾಯಿಕ ಕರಕುಶಲ ವಸ್ತುಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುವ ರಾಹುಲ್ ಗಾಂಧಿ, ಇಂದಿನ ಪೀಳಿಗೆಯು ಈ ವಿಷಯಗಳನ್ನು ಗಮನಿಸಬೇಕೆಂದು ಹೇಳಿದ್ದಾರೆ. ಕುಶಲಕರ್ಮಿಗಳನ್ನು ಮಾತನಾಡಿಸಿ ಅವರ ಕೆಲಸದ ಕುರಿತಾಗಿ ಮಾಹಿತಿ ಪಡೆದಿದ್ದಾರೆ.