ಬೆಂಗಳೂರು: ರಾಗಿ ಖರೀದಿಗೆ ವಿಧಿಸಿದನಿರ್ಬಂಧ ತೆಗೆದುಹಾಕಬೇಕೆಂದು ಪ್ರಧಾನಿಯವರಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳನ್ನು ತಕ್ಷಣವೇ ತೆಗೆದುಹಾಕಬೇಕೆಂದು ಹೇಳಿದ್ದಾರೆ. ರೈತರು ಖರೀದಿ ಕೇಂದ್ರಗಳಿಗೆ ಎಷ್ಟು ಕ್ವಿಂಟಲ್ ರಾಗಿ ತರುತ್ತಾರೆಯೋ ಅಷ್ಟನ್ನೂ ಕೂಡ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೇವಲ 2.10 ಲಕ್ಷ ಟನ್ ರಾಗಿ ಖರೀದಿಗೆ ಒತ್ತಡ ಹೇರಲಾಗಿದೆ. ಪ್ರತಿ ಕ್ವಿಂಟಲ್ ಗೆ ಮುಕ್ತ ಮಾರುಕಟ್ಟೆಯಲ್ಲಿ 1800 ರೂ.ನಿಂದ 2180 ರೂ. ದರ ಇದೆ. ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.