ಕಲಬುರ್ಗಿ: ರಾಘವ ಚೈತನ್ಯ ರಥ ಯಾತ್ರೆಗೆ ಕಲಬುರ್ಗಿ ಹೈಕೋರ್ಟ್ ಪೀಠ ಷರತ್ತು ಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ರಾಘವ ಚೈತನ್ಯ ರಥಯಾತ್ರೆ ನಡೆಯಲಿದೆ. ರಥಯಾತ್ರೆಗೆ ಅನುಮತಿ ಕೋರಿ ಹಿಂದೂ ಮುಖಂಡರು ಅರ್ಜಿ ಸಲ್ಲಿಸಿದ್ದರು.
ಲಾಡ್ಲೆ ಮಶಾಕ್ ದರ್ಗಾ ವಿವಾದ ಹಿನ್ನೆಲೆಯಲ್ಲಿ, ರಥಯಾತ್ರೆಗೆ ಕೋರ್ಟ್ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ. ರಥಯಾತ್ರೆ ವೇಳೆ ಡಿಜೆ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಅನ್ಯ ಸಮುದಾಯದ ವಿರುದ್ಧ ಯಾರೂ ಘೋಷಣೆ ಕೂಗುವಂತಿಲ್ಲ. ವಿವಾದಿತ ಸ್ಥಳದ ಕಡೆಗೆ ರಾಘವ ಚೈತನ್ಯ ರಥಯಾತ್ರೆ ಹೋಗುವಂತಿಲ್ಲ. ಸೂರ್ಯಾಸ್ತದ ಬಳಿಕ ರಥಯಾತ್ರೆ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿ ಅನುಮತಿ ನೀಡಿದೆ.
ಕಳೆದ ಬಾರಿ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ವೇಳೆ ಗಲಾಟೆಯಾಗಿತ್ತು. ಶಿವಲಿಂಗ ಪೂಜೆಗೆ ತೆರಳಿದ್ದ ವೇಳೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಈಬಾರಿ ಷರತ್ತುಗಳನ್ನು ವಿಧಿಸಿದೆ.