
ಇದೀಗ ಇವರಿಬ್ಬರು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂಬ ರೀತಿ ಎಎಪಿ ನಾಯಕ ಮಾಡಿರುವ ಟ್ವೀಟ್ ಗಮನ ಸೆಳೆದಿದೆ. ಎಎಪಿ ಪಕ್ಷದ ನಾಯಕ ಸಂಜೀವ್ ಅರೋರಾ, ಈ ಜೋಡಿಯನ್ನ ಅಭಿನಂದಿಸಿದ್ದು ಅವರನ್ನು ಆಶೀರ್ವದಿಸಿದ್ದಾರೆ.
“ನಾನು ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಜೋಡಿಯು ಪ್ರೀತಿ, ಸಂತೋಷ ಮತ್ತು ಒಡನಾಟದ ಸಮೃದ್ಧಿಯಿಂದ ತುಂಬಿರಲಿ. ನನ್ನ ಶುಭಾಶಯಗಳು” ಎಂದು ಸಂಜೀನ್ ಅರೋರಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಟ್ವಿಟರ್ ಬಳಕೆದಾರರು ಕೂಡ ಇಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ.