
ಕೇಂದ್ರ ಸರ್ಕಾರವು ವಿವಾದಾತ್ಮಕ ಕೃಷಿ ಮಸೂದೆ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಟ್ವಿಟರ್ನಲ್ಲಿ ನವಜೋತ್ ಸಿಂಗ್ ಸಿಧು ಆಕ್ರೋಶ ವ್ಯಕ್ತಪಡಿಸಿದ ಸಂಬಂಧ ರಾಘವ್ ಚಡ್ಡಾ ಈ ಹೇಳಿಕೆಯನ್ನು ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರೇ ನೀವು ಖಾಸಗಿ ಮಂಡಿಯ ಕೇಂದ್ರದ ಕಪ್ಪು ಕಾನೂನಿಗೆ ಸೂಚನೆ ನೀಡಿದ್ದೀರಾ…? ಇದನ್ನು ಡಿ ನೋಟಿಫೈ ಮಾಡಲು ಸಾಧ್ಯವೇ ಅಥವಾ ನಿಮ್ಮ ಛದ್ಮವೇಷ ಇನ್ನೂ ಮುಂದುವರಿದಿದೆಯೇ..? ಎಂದು ಸಿಧು ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದ್ದರು.
ಪಂಜಾಬ್ ರಾಜಕೀಯದ ರಾಖಿ ಸಾವಂತ್ ನವಜೋತ್ ಸಿಂಗ್ ಸಿಧು, ಕ್ಯಾಪ್ಟನ್ ವಿರುದ್ಧ ನಿರಂತರ ವಾಗ್ದಾಳಿ ಮಾಡಿದ ಕಾರಣಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ನಿಂದ ಬೈಸಿಕೊಂಡಿದ್ದರು. ಹೀಗಾಗಿ ಅವರು ಇದೀಗ ಅರವಿಂದ ಕೇಜ್ರಿವಾಲ್ರ ಹಿಂದೆ ಬಿದ್ದಿದ್ದಾರೆ. ನಾಳೆಯವರೆಗೆ ಕಾಯಿರಿ. ಕ್ಯಾಪ್ಟನ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ.