ಮಂಗಳೂರು: ಮಂಗಳೂರಿನ ಫಳ್ನೀರ್ ನಲ್ಲಿರುವ ಇಂದಿರಾಗಾಂಧಿ ಕಾಲೇಜ್ ನಲ್ಲಿ ನಡೆದ ರ್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ವಿದ್ಯಾರ್ಥಿಗಳಾದ ಶ್ರೀಲಾಲ್, ಶಾಹಿದ್, ಅಮ್ಜದ್, ಜುರೈಜ್, ಹುಸೇನ್, ಲಿಮ್ಸ್ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಜುಲೈ 14 ರಂದು ರಾತ್ರಿ ಹೋಟೆಲ್ ವೊಂದಕ್ಕೆ ರ್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಮ್ಯಾನುಯಲ್ ಬಾಬು ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಸೀನಿಯರ್ ವಿದ್ಯಾರ್ಥಿ ಶ್ರೀಲಾಲ್, ಏಕೆ ಮುಖ ನೋಡುತ್ತಿದ್ದೀಯಾ ಗೌರವ ಕೊಡು ಎಂದು ಬೆದರಿಸಿ ರ್ಯಾಗಿಂಗ್ ಮಾಡಿದ್ದಾನೆ.
ರಾತ್ರಿ ವೇಳೆ ಅತ್ತಾವರದ ಅಪಾರ್ಟ್ ಮೆಂಟ್ ರೂಮ್ ನಲ್ಲಿದ್ದ ಮ್ಯಾನುಯೆಲ್ ಬಾಬು ಇದ್ದ ಸಂದರ್ಭದಲ್ಲಿ ಆರೋಪಿಗಳು ಮಾರಕಾಸ್ತ್ರ ತೋರಿಸಿ ಬೆದರಿಸಿ ನಿಂದಿಸಿದ್ದಲ್ಲದೇ, ಒಳಉಡುಪಿನಲ್ಲಿ ಬಸ್ಕಿ ಹೊಡೆಸಿದ್ದಾರೆ. ಒಪ್ಪದಿದ್ದಾಗ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.