ನವದೆಹಲಿ: ಈ ಬಾರಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಫೆಲ್ ಜೆಟ್ ಭಾಗಿಯಾಗಲಿವೆ. ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಫೆಲ್ ಜೆಟ್ ಭಾಗಿಯಾಗಲಿವೆ ಎಂದು ಭಾರತೀಯ ವಾಯುಸೇನೆಯ ವತಿಯಿಂದ ಅಧಿಕೃತ ಪ್ರಕಟಣೆ ನೀಡಲಾಗಿದೆ.
ಫ್ರಾನ್ಸ್ ನಿರ್ಮಿತ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್ ಶಕ್ತಿ ಪ್ರದರ್ಶನವಾಗಲಿದೆ. ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ವಾಯುಸೇನೆ ದಿನಾಚರಣೆಯಲ್ಲಿ ಅತ್ಯಾಧುನಿಕ ರಫೆಲ್ ಯುದ್ಧ ವಿಮಾನ ಶಕ್ತಿ ಪ್ರದರ್ಶನ ನಡೆಸಲಾಗಿತ್ತು. ಈಗ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಕ್ತಿ ಪ್ರದರ್ಶನ ನಡೆಯಲಿದೆ ಎಂದು ಹೇಳಲಾಗಿದೆ.