ಮೂಲಂಗಿಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದು ಕೂದಲು ಹಾಗೂ ಚರ್ಮದ ಹೊಳಪಿಗೆ ಬಹಳ ಮುಖ್ಯ. ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾದ ಮೂಲಂಗಿ ಚರ್ಮಕ್ಕೆ ಪುನರ್ ಚೇತನ ನೀಡುತ್ತದೆ. ಇದರಲ್ಲಿನ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಫಾಸ್ಫರಸ್, ಪ್ರೋಟಿನ್ ಮತ್ತು ನಾರಿನ ಅಂಶವು ಚರ್ಮಕ್ಕೆ ಹಾಗೂ ಕೂದಲಿಗೆ ಮ್ಯಾಜಿಕ್ ಮಾಡುತ್ತದೆ.
ಉರಿಯೂತ, ಗಂಟಲಿನ ಕಿರಿಕಿರಿ, ಜ್ವರ ಮತ್ತು ಪಿತ್ತ ದೋಷಗಳಂಥ ಹಲವಾರು ಸಮಸ್ಯೆಗಳ ಚಿಕಿತ್ಸೆಗಳಿಗೆ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧಿ ಪದ್ಧತಿಯಲ್ಲಿ ಇದು ಬಳಕೆ ಆಗುತ್ತಿದೆ. ಮೂಲಂಗಿ ರಸದಲ್ಲಿ ಇರುವ ಐಸೋ ಥೈನೋಸೈಡ್ ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ. ಮಲಬದ್ಧತೆ ತಡೆಯುತ್ತದೆ.
ಮೂಲಂಗಿಯಲ್ಲಿ ನಾರಿನಾಂಶ ಹೇರಳವಾಗಿದ್ದು, ದೇಹದ ತೂಕವನ್ನು ಇಳಿಸಿಕೊಳ್ಳುವುದು ಸುಲಭ ಆಗುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮೂಲಂಗಿಯಲ್ಲಿ ಇರುವ ವಿಟಮಿನ್ ಗಳು ಕ್ಯಾನ್ಸರ್ ನಿಗ್ರಹ ಗುಣಗಳನ್ನು ಹೊಂದಿದೆ.