alex Certify ರೈತರಿಗೆ ಮುಖ್ಯ ಮಾಹಿತಿ: ರಾಯಚೂರು ಆಕಾಶವಾಣಿ ಕೇಂದ್ರದಿಂದ ನೇರ ಫೋನ್-ಇನ್ ಕಾರ್ಯಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮುಖ್ಯ ಮಾಹಿತಿ: ರಾಯಚೂರು ಆಕಾಶವಾಣಿ ಕೇಂದ್ರದಿಂದ ನೇರ ಫೋನ್-ಇನ್ ಕಾರ್ಯಕ್ರಮ

ರಾಯಚೂರು ಆಕಾಶವಾಣಿ ಕೇಂದ್ರದಿಂದ ಶುಕ್ರವಾರ (ಆಗಸ್ಟ್ 09) ರಂದು ಸಾಯಂಕಾಲ 6 ಗಂಟೆ 51 ನಿಮಿಷದಿಂದ 7 ಗಂಟೆ 34 ನಿಮಿಷದವರೆಗೆ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ನೇರ ಫೋನ್-ಇನ್ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.

ಈ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟತಜ್ಞರಾದ ಡಾ. ಶಿವಾನಂದ ಜಿ ಹಂಚಿನಾಳ ಮತ್ತು ಸಸ್ಯರೋಗ ತಜ್ಞರಾದ ಡಾ. ಅಶ್ವತ್ ನಾರಾಯಣ ಅವರುಗಳು ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಕೇಳುಗರು ಹಾಗೂ ರೈತ ಬಾಂಧವರು ರಾಯಚೂರು ಆಕಾಶವಾಣಿಯ ದೂರವಾಣಿ ಸಂಖ್ಯೆ 08532–295898 ಅಥವಾ 08532-200312 ಇವುಗಳಿಗೆ ಕರೆಮಾಡಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ಜಿಲ್ಲೆಯ ಕೇಳುಗರು ಹಾಗೂ ರೈತ ಬಾಂಧವರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯುವಂತೆ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...