‘ರಾಧಿಕಾ’ ಧಾರಾವಾಹಿಗೆ 900 ಸಂಚಿಕೆಗಳ ಮೈಲಿಗಲ್ಲು 04-01-2025 11:48AM IST / No Comments / Posted In: Featured News, Live News, Entertainment ಉದಯ ಟಿವಿಯಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಪ್ರಸಾರವಾಗುವ ರಾಧಿಕಾ ಧಾರಾವಾಹಿ 900 ಸಂಚಿಕೆಗಳನ್ನು ಪೂರೈಸಿದೆ. ಉದಯವಾಹಿನಿ ಈ ಸಂತಸವನ್ನು ತನ್ನ ಅಧಿಕೃತ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಮುಂದುವರೆಯಲಿ ಎನ್ನುವ ಮೂಲಕ ವೀಕ್ಷಕರಿಗೆ ಧನ್ಯವಾದ ತಿಳಿಸಿದೆ. ದರ್ಶಿತ್ ಭಟ್ ಬಾಲವಳ್ಳಿ ನಿರ್ದೇಶನದ ಈ ಧಾರಾವಾಹಿಯಲ್ಲಿ ತೇಜಸ್ವಿನಿ ಶೇಖರ್ ಮತ್ತು ಶರತ್ ಕ್ಷತ್ರಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರವಿಕುಮಾರ್, ಮಾಲತಿ ಸಿರ್ದೇಶಪಾಂಡೆ, ಸುರೇಶ್ ರೈ, ಸವಿತಾ ಕೃಷ್ಣಮೂರ್ತಿ, ಶ್ವೇತಾ ರಾವ್, ಕಾಶಿಯಾಗಿ, ರೇಖಾ ಸಾಗರ್, ಇಂಚರ ಶೆಟ್ಟಿ, ಪ್ರಿಯಾ ದರ್ಶಿನಿ, ಮೂರ್ತಿ, ರೇಖಾ ದಾಸ್, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀ ದುರ್ಗಾ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. View this post on Instagram A post shared by Udaya TV (@udayatv)