ಗಾಂಧೀಜಿಯವರ ಚಿತ್ರವಿರುವ ನೋಟು ಎಲ್ಲರಿಗೂ ಗೊತ್ತು. ಆದರೆ ಶ್ರೀ ರಾಮನ ಭಾವಚಿತ್ರವಿರುವ ನೋಟು ನೋಡಿದ್ದಿರಾ ? ಮರ್ಯಾದಾ ಪುರುಷೋತ್ತಮನ ಭಾವಚಿತ್ರ ಇರುವ ನೋಟುಗಳು ಭಾರತದಲ್ಲಲ್ಲ, ವಿದೇಶದಲ್ಲಿ ಮುದ್ರಣಗೊಂಡಿದೆ.
ರಾಮನ ಭಾವಚಿತ್ರ ಇರುವಂತ ನೋಟನ್ನು 2001ರ ಅಕ್ಟೋಬರ್‌ನಲ್ಲಿ ದಿ ಗ್ಲೋಬಲ್ ಕಂಟ್ರಿ ಆಫ್ ವರ್ಲ್ಡ್ ಪೀಸ್ ಎಂಬ ಸಂಸ್ಥೆ, ಮಹರ್ಷಿ ಮಹೇಶ್ ಯೋಗಿಯೊಂದಿಗೆ ಮುದ್ರಿಸಿತ್ತು. ಈ ನೋಟನ್ನು ಬಳಸಿ ಮಹೇಶ್ ಯೋಗಿ ಆಶ್ರಮದಲ್ಲಿ ಇರುವ ಯಾವುದೇ ವಸ್ತುಗಳನ್ನು ಖರೀದಿಸಬಹುದಾಗಿತ್ತು. ಹಾಗೆ ಈ ನೋಟುಗಳನ್ನ ಆಶ್ರಮಕ್ಕೆ ಸಂಬಂಧಿಸಿದವರು ಮಾತ್ರ ಬಳಸಬಹುದಾಗಿತ್ತು.
ಮನೆಯಲ್ಲೇ ಅಕ್ಕಿ ಚಿಪ್ಸ್ ಮಾಡಿ ರುಚಿ ನೋಡಿ
ಜಿಸಿಡಬ್ಲ್ಯುಪಿಯ ಪ್ರಧಾನ ಕಚೇರಿ ವೆಬ್‌ಸೈಟ್‌ನಲ್ಲಿ 2002ರ ಫೆಬ್ರವರಿ 24ರಂದು ರಾಮ ಮುದ್ರಾವನ್ನು ವಿತರಿಸಲು ಆರಂಭಿಸಿತ್ತು. ಏಕ್ ರಾಮ್ ಮುದ್ರಾ ಪತ್ರಿಕೆಯ ಬೆಲೆಯನ್ನು 10 ಡಾಲರ್ಗೆ ಫಿಕ್ಸ್ ಮಾಡಲಾಗಿತ್ತು. ಬಿಬಿಸಿ ವರದಿಯ ಪ್ರಕಾರ, 2003 ರಲ್ಲಿ, ‘ರಾಮ್ ಮುದ್ರಾ’ ನೆದರ್‌ಲ್ಯಾಂಡ್ ನ ಸುಮಾರು 100 ಅಂಗಡಿಗಳು, 30 ಹಳ್ಳಿಗಳು ಮತ್ತು ಹಲವಾರು ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆ ಸಮಯದಲ್ಲಿ, ಡಚ್ ಸೆಂಟ್ರಲ್ ಬ್ಯಾಂಕ್, ರಾಮ ಮುದ್ರಾ ಮೇಲೆಯೇ ಕಣ್ಣಿಟ್ಟಿತ್ತು. ಮಹರ್ಷಿ ಮಹೇಶ್ ಯೋಗಿಯವರ ಸಂಸ್ಥೆಯು ಈ ಕರೆನ್ಸಿಯನ್ನು ಆಶ್ರಮದೊಳಗೆ ಮಾತ್ರ ಉಪಯೋಗಿಸಿಕೊಳ್ಳುವಂತೆ ತಾಕೀತು ಮಾಡಿತ್ತು.
ಆ ಸಮಯದಲ್ಲಿ, ರಾಮ್ ಅವರ ಚಿತ್ರದೊಂದಿಗೆ 1, 5 ಮತ್ತು 10 ರ ಕರೆನ್ಸಿ ಮುದ್ರಿಸಲಾಗುತ್ತಿತ್ತು. ಇದನ್ನು ನೆದರ್ಲ್ಯಾಂಡ್ ಮತ್ತು ಅಮೆರಿಕದ ಕೆಲವು ಸ್ಥಳಗಳಲ್ಲಿ ಮಾತ್ರ ಸ್ವೀಕರಿಸಲಾಗುತ್ತಿತ್ತು.