ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದೆ. ಇದನ್ನು ಟೀಂ ಇಂಡಿಯಾ ಆಟಗಾರರಾದ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್ ಮತ್ತು ಚೇತೇಶ್ವರ ಪೂಜಾರ ಅವರು ವಿಭಿನ್ನವಾಗಿ ಆಚರಿಸಿದ್ದಾರೆ.
ಹೌದು, ಕ್ರಿಕೆಟಿಗರು ಗೆಲುವಿನ ಖುಷಿಯಲ್ಲಿ ಸ್ಥಳೀಯ ರಾಗಗಳಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ಅಶ್ವಿನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಪಂದ್ಯದ ನಂತರದ ಸಾಂಪ್ರದಾಯಿಕ ಫೋಟೋಗಳು ತುಂಬಾ ನೀರಸವಾಗಿವೆ. ಆದ್ದರಿಂದ ಗೆಲುವನ್ನು ಸ್ಮರಣೀಯವಾಗಿ ಆಚರಿಸಲು ಸಾಂಪ್ರದಾಯಿಕ ರಾಗಕ್ಕೆ ಹೆಜ್ಜೆ ಹಾಕಿರುವುದಾಗಿ ಅಶ್ವಿನ್ ತಿಳಿಸಿದ್ದಾರೆ.
ಅಶ್ವಿನ್ ಮತ್ತು ಸಿರಾಜ್, ಪೂಜಾರ ಅವರೊಂದಿಗೆ ನೃತ್ಯ ಮಾಡುತ್ತಿದ್ದರೆ, ಕೆ.ಎಲ್. ರಾಹುಲ್ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟಿಗರ ನೃತ್ಯ ನೋಡಿದ ನೆಟ್ಟಿಗರು ಖುಷಿಪಟ್ಟಿದ್ದಾರೆ.
ಭಾರತವು ಟೆಸ್ಟ್ ಪಂದ್ಯದಲ್ಲಿ ಪ್ರಬಲ ಜಯದೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾದ ನೆಲದಲ್ಲಿ ಮೊದಲ ಟೆಸ್ಟ್ ಸರಣಿಯನ್ನು ಗೆಲ್ಲುವ ಅವಕಾಶವನ್ನು ಹೆಚ್ಚಿಸಿದೆ.