ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಟೀಂ ಇಂಡಿಯಾ ಈ ಸರಣಿಯಲ್ಲಿ 2-0ರ ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಅಧ್ಬುತ ಪ್ರದರ್ಶನ ನೀಡ್ತಿದೆ. ಹಲವು ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದ ಆಟಗಾರ, ರೋಹಿತ್ ನಾಯಕತ್ವದಲ್ಲಿ ಮಿಂಚುತ್ತಿದ್ದಾರೆ.
ಯಸ್, ಟೀಂ ಇಂಡಿಯಾದ ದಿಗ್ಗಜ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಕಮಾಲ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಂತರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ತೋರಿಸಿದ್ದಾರೆ. ಅಶ್ವಿನ್ ಕಳೆದ ನಾಲ್ಕು ವರ್ಷಗಳಿಂದ ಟಿ 20 ತಂಡದಿಂದ ಹೊರಗುಳಿದಿದ್ದರು. ಆದ್ರೀಗ ಟಿ20 ಕ್ರಿಕೆಟ್ ಗೆ ಅಶ್ವಿನ್ ವಾಪಸ್ ಆಗಿದ್ದಾರೆ. ವಿಶ್ವಕಪ್ ಬಳಿಕ ಇದೀಗ ನ್ಯೂಜಿಲೆಂಡ್ ವಿರುದ್ಧವೂ ಅಶ್ವಿನ್ ಅದ್ಭುತ ಬೌಲಿಂಗ್ ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಶ್ವಿನ್ 4 ಓವರ್ ಗಳಲ್ಲಿ ಕೇವಲ 19 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 4 ಓವರ್‌ಗೆ 23 ರನ್ ನೀಡಿ 2 ವಿಕೆಟ್ ಪಡೆದ್ದರು. ರವಿಚಂದ್ರನ್ ಅಶ್ವಿನ್ ಜುಲೈ 9, 2017 ರ ನಂತರ ಈ ವರ್ಷ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಟಿ-20 ಸೀಮಿತ ಓವರ್ ನಲ್ಲೂ ಅಶ್ವಿನ್ ಅತ್ಯುತ್ತಮ ಪ್ರದರ್ಶನ ನೀಡ್ತಿದ್ದು, ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.