alex Certify BIG NEWS : ನನ್ನನ್ನು ಮುಟ್ಟಿದ್ರೆ ಹುಷಾರ್..! ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿದ ಆರ್.ಅಶೋಕ್ |WATCH VIDEO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ನನ್ನನ್ನು ಮುಟ್ಟಿದ್ರೆ ಹುಷಾರ್..! ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿದ ಆರ್.ಅಶೋಕ್ |WATCH VIDEO

ಬೆಂಗಳೂರು : ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳಿಗೆ ಆರ್ ಅಶೋಕ್ ಅವಾಜ್ ಹಾಕಿದ್ದು, ಕಾಂಗ್ರೆಸ್ ವಿಡಿಯೋ ರಿಲೀಸ್ ಮಾಡಿದೆ.

ಹೌದು. ಬೆಂಗಳೂರಿನ ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಪರಿಷತ್ ಸದಸ್ಯ ರವಿ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ್ದಾರೆ. ಪೊಲೀಸರು ಆರ್.ಅಶೋಕ್ ಹಾಗೂ ಬಿಜೆಪಿ ನಾಯಕರನ್ನು ತಡೆಯುತ್ತಿದ್ದಂತೆ ಆರ್.ಅಶೋಕ್ ಪೊಲೀಸರ ಮೇಲೆ ರೋಷಾವೇಷ ವ್ಯಕ್ತಪಡಿಸಿದ್ದಾರೆ.

ನಾವೇನು ಇಲ್ಲಿ ಪ್ರತಿಭಟನೆ ಮಾಡಲು ಬಂದಿಲ್ಲ. ನಾವು ನಿಂತಿರುವ ಜಾಗಕ್ಕೂ ಟ್ಯಾಕ್ಸ್ ಕಟ್ಟಬೇಕಾ? ನಾವು ಪ್ರಯಾಣಿಕರಿಗೆ ಗುಲಾಬಿ ಹೂ ನೀಡಲು ಬಂದಿದ್ದೇವೆ. ನಮ್ಮನ್ನು ಬಂದಿಸುತ್ತಿದ್ದೀರಾ? ನಮ್ಮನ್ನು ಅರೆಸ್ಟ್ ಮಾಡಿ ಸೆಂಟ್ರಲ್ ಜೈಲಿಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೊಲೀಸರು ಸಮಾಧಾನ ಪಡಿಸಲು ಮುಂದಾಗಿತ್ತಿದ್ದಂತೆ ಇನ್ಸ್ ಪೆಕ್ಟರ್ ಮಾರುತಿ ಎಂಬ ಹಿರಿಯ ಪೊಲೀಸರೊಬ್ಬರ ಮೇಲೆ ಬಂಧಿಸಲು ಮುಂದಾದರೆ ಎಚ್ಚರ. ಮುಂದೇ ಇದೇ ಸರ್ಕಾರ ಇರಲ್ಲ ಹುಷಾರ್! ಎಂದು ಆವಾಜ್ ಹಾಕಿದ್ದಾರೆ.

ಕಾಂಗ್ರೆಸ್ ಕಿಡಿ

ಆರ್ ಅಶೋಕ್ ಅವರೇ, ವಿಪಕ್ಷ ನಾಯಕರಾಗಿಬಿಟ್ಟರೆ ಕರ್ತವ್ಯದಲ್ಲಿರುವ ಪೋಲೀಸ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಬಹುದೇ? ನಿನ್ನ ಅ-___ ಅನ್ನೋದು ಎಷ್ಟು ಸರಿ? ಗೂಂಡಾಗಿರಿ ವಿಪಕ್ಷ ನಾಯಕನ ಕೆಲಸವೇ? ನಾಲಿಗೆ ಸಂಸ್ಕಾರ ಹೇಳುತ್ತದೆ, ಸಿಟಿ ರವಿ ನಂತರ ಈಗ ನಿಮ್ಮ ಸರದಿಯೇ? ನೀವು ವಿರೋಧಪಕ್ಷ ನಾಯಕನಾಗಿ ಉಳಿಯಲು ಅರ್ಹರಲ್ಲ ಎಂಬುದನ್ನು ನಿಮ್ಮ ನಡತೆ ಹೇಳುತ್ತಿದೆ. ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾರುದ್ದದ ಭಾಷಣ ಬಿಗಿಯುವ ನಿಮ್ಮ ನಾಯಕರ ಹೊಲಸು ನಾಲಿಗೆಯನ್ನು ಯಾವ ಫೆನಾಯಿಲ್ನಿಂದ ತೊಳೆಯಬೇಕು ಎಂದು ಕಿಡಿಕಾರಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...