ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನಂದನವನ ಲೇಔಟ್ ನಿವಾಸದಲ್ಲಿ ಆರ್.ಅಶೋಕ್ ಅವರು ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನ ಪಡೆದರು.
ನಂತರ ಮಾತನಾಡಿದ ಆರ್ ಅಶೋಕ್ ‘ ದೇಶಕ್ಕಾಗಿ ಧೈರ್ಯ, ಶೌರ್ಯದಿಂದ ಎಂ.ವಿ.ಪ್ರಾಂಜಲ್ ಹೋರಾಡಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುಣ್ಯ ಪುತ್ರ. ವೀರಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಆತ್ಮಕ್ಕೆ ಶಾಂತಿ ಸಿಗಲಿ. ವೀರ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಕರ್ನಾಟಕದ ಹೆಮ್ಮೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಪ್ರಾಂಜಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂಟೆಕ್ ಮಾಡುತ್ತಿದ್ದಾರೆ. ಪ್ರಾಂಜಲ್ ಹುತಾತ್ಮರಾದ ಸುದ್ದಿ ಕೇಳಿ ಅವರ ಕುಟುಂಬಕ್ಕೆ ದಿಗ್ಬ್ರಮೆ ಉಂಟಾಗಿದೆ . ರಜೌರಿ ಎನ್ ಕೌಂಟರ್ ನಲ್ಲಿ ಯೋಧ ಹುತಾತ್ಮರಾಗಿದ್ದಾರೆ.