ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕಿತ್ತಾಟ ನಡೆಯುತ್ತಿದೆ. ರಣದೀಪ್ ಸಿಂಗ್ ಸುರ್ಜೇವಾಲ ತೇಪೆ ಹಚ್ಚಲು ಬಂದಿದ್ದಾರೆ. ಅವರು ಬಂದು ಹೋದರೂ ಕಿತ್ತಾಟ ನಿಲ್ಲಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ಆಗುವವರೆಗೂ ಈ ಕಿತ್ತಾಟ ನಿಲ್ಲಲ್ಲ. ಸುರ್ಜೇವಾಲ ಬಂದು ಹೇಳಿ ಹೋದ್ರು ಇದು ಸರಿ ಹೋಗಲ್ಲ. ಗಲಾಟೆ ನಿಲ್ಲಲ್ಲ. ಪವರ್ ಶೇರಿಂಗ್ ಸತ್ಯವೇ ಎಂಬುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಬೇಕು. ಅಲ್ಲಿಯವರೆಗೂ ಇದು ನಿಲ್ಲಲ್ಲ ಎಂದರು.
ಶಾಸಕಾಂಗ ಪಕ್ಷದ ಸಭೆ ಬಳಿಕ ಡಿನ್ನರ್ ಮೀಟಿಂಗ್ ಮಾಡಬೇಡಿ ಎನ್ನುತ್ತಾರೆ. ಸಿಎಂ ವಿರುದ್ಧ ಮಾತನಾಡಬೇಡಿ ಅಂತಾರೆ. ಅದಾದ ಎರಡು ದಿನ ಆದ ಮೇಲೆ ಮತ್ತೆ ಕುರ್ಚಿ ಫೈಟ್ ಆರಂಭವಾಗುತ್ತೆ. ಕಾಂಗ್ರೆಸ್ ನಲ್ಲಿ ಯಾವುದೂ ಸರಿಯಿಲ್ಲ. ಬಜೆಟ್ ಬಳಿಕ ಸರ್ಕಾರದಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂದು ಹೇಳಿದರು.