ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ನಾಸೀರ್ ಹುಸೇನ್ ಗೂ ಸಂಕಷ್ಟ ಎದುರಾದಂತಿದೆ.
ನಾಸೀರ್ ಹುಸೇನ್ ಗೆ ಪ್ರತಿಜ್ಞಾವಿಧಿ ಬೋಧಿಸದಂತೆ 24 ನಿವೃತ್ತ ಐಎ ಎಸ್, ಐಪಿಎಸ್, ಐಎಫ್ ಎಸ್, ಐಆರ್ ಎಸ್ ಅಧಿಕಾರಿಗಳು ಉಪರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಇದನ್ನು ವಿಪಕ್ಷ ನಾಯಕ ಆರ್. ಅಶೋಕ್ ಸ್ವಾಗತಿಸಿದ್ದಾರೆ.
ಪಾಕಿಸ್ತಾನ ಪರ ಘೋಷಣೆ ಕೂಗಿರುವ ಪ್ರಕರಣದ ಸಂಪೂರ್ಣ ತನಿಖೆ ನಡೆಯುವವರೆಗೂ ನಾಸೀರ್ ಹುಸೇನ್ ಗೆ ಪ್ರತಿಜ್ಞಾವಿಧಿ ಬೋಧಿಸುವಂತಿಲ್ಲ ಎಂದು ಆಗ್ರಹಿಸಿದ್ದಾರೆ. ದೇಶದ್ರೋಹಿಗಳಿಂದ ಸುತ್ತುವರೆದಿದ್ದ ನಾಯಕ ಪ್ರಜಾಪ್ರಭುತ್ವದ ದೇಗುಲ ಸಂಸತ್ ಪ್ರವೇಶಿಸುವ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.