ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರೆದಿದೆ. ಆಸ್ಪತ್ರೆಗಳಿಗೆ ಹೆರಿಗೆಗೆಂದು ಹೋದವರು ಶವವಾಗಿ ಬರ್ತಿದ್ದಾರೆ. ಮೊದಲು ರಾಜ್ಯದಲ್ಲಿ ನಡೆಯುತ್ತಿರುವ ಬಾಣಂತಿಯರ ಸಾವು ನಿಲ್ಲಿಸಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಆರ್.ಅಶೋಕ್, ರಾಜ್ಯದಲ್ಲಿ ಇನ್ನೂ ಕೂಡ ಬಾಣಂತಿಯರ ಸಾವು ನಿಂತಿಲ್ಲ. ಅಧಿವೇಶನದಲ್ಲಿ ನಾವು ಸರ್ಕಾರದ ಕಿವಿ ಹಿಂಡಿದ್ದೆವು. ಆದರೂ ಪ್ರಯೋಜನವಾಗಿಲ್ಲ. ಮೆಡಿಕಲ್ ಮಾಫಿಯಾಗೆ ಸರ್ಕಾರ ಬಗ್ಗಿರುವುದು ಸ್ಪಷ್ಟವಾಗಿದೆ. ಹೆರಿಗೆಗೆಂದು ಹೋದ ತಾಯಂದಿರುವ ಶವಾಗಿ ಬರುತ್ತಿದ್ದಾರೆ. ಜಿಲ್ಲೆ ಜಿಲ್ಲೆಗಳಲ್ಲಿಯೂ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿದೆ. ಇಷ್ಟೆಲ್ಲ ಆದರೂ ಸಿಎಂ, ಸಚಿವರು ಎಚ್ಚೆತ್ತುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆಡಿಕಲ್ ಮಫಿಯಾ ನಡೆಯುತ್ತಿದೆ. ಬಾಣಂತಿಯರ ಸಾವು ಸರ್ಕಾರಿ ಪ್ರಾಯೋಜಿತ ಕೊಲೆಗೆ ಸಮವಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಲಿ. ಬಾಣಂತಿಯರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.
ಅಪ್ಪ, ಸಿಎಂ ಸಿದ್ದರಾಮಯ್ಯ, ನಿಮ್ಮ ಗ್ಯಾರಂಟಿ 2000 ರೂ ಬೇಡ. ಮೊದಲು ರಾಜ್ಯದಲ್ಲಿ ಬಾಣಂತಿಯರ ಸಾವು ನಿಲ್ಲಿಸಿ. ಗೃಹಲಕ್ಷ್ಮೀ ಯೋಜನೆ ಮನೆ ಯಜಮಾನಿಯರಿಗೆ 2000 ರೂ ಹಾಕಿದ್ದೀವಿ. ಅವರು ಹೊಲಿಗೆ ಯಂತ್ರ ಖರೀದಿಸಿದರು, ಬೋರ್ ವೆಲ್ ಕೊರೆಸಿದರು, ಗ್ರಂಥಾಲಯ ತೆಗೆದರು ಎಂದು ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದೀರಾ. ಜಿಲ್ಲೆ ಜಿಲ್ಲೆಗಳಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿದೆ. ಆದಾಗ್ಯೂ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬಾಣಂತಿಯರು, ಶಿಶಿಗಳು ಸಾವನ್ನಪ್ಪುತ್ತಿದ್ದರೂ ಜೀವಕ್ಕೆ ಬೆಲೆ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.