![](https://kannadadunia.com/wp-content/uploads/2021/12/r-ashoka-dh-1-1020795-1629216198.jpg)
ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮುಖಭಂಗ ಅನುಭವಿಸಿದ್ದು, ಬಿಜೆಪಿ ಗೆಲುವು ಖಚಿತವಾಗಿದೆ. ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಅರವಿಂದ್ ಕೇಜ್ರಿವಾಲ್ ಸಾವಿರಾರು ವರ್ಷಗಳ ಇತಿಹಾಸವಿರುವ ಯಮುನಾ ನದಿಗೆ ಕಳಂಕ ತಂದಿದ್ದೇ ಸೋಲಲು ಕಾರಣ ಎಂದಿದ್ದಾರೆ.
ಆಪ್ ಸೋಲಿಗೆ ಯಮುನಾ ನದಿಯನ್ನು ಕಲುಷಿತಗೊಳಿಸಿದ್ದೇ ಕಾರಣ. ಅಲ್ಲದೇ ಕೇಜ್ರಿವಾಲ್ ಜೈಲಿನಲ್ಲಿದ್ದುಕೊಂಡು ಎರಡು ತಿಂಗಳ ಕಾಲ ಆಡಳಿತ ಸ್ಥಗಿತಗೊಳಿಸಿದರು. ಪರಿಣಾಮ ಇಂದು ಫಲಿತಾಂಶ ಈ ಸ್ಥಿತಿಗೆ ಬಂದಿದೆ ಎಂದರು.
ಕಾರು, ಮಫ್ಲರ್, ನಿಮಿಷಕ್ಕೊಮ್ಮೆ ಕೆಮ್ಮೋದು, ಎರಡು ಬೆಡ್ ರೂ ಫ್ಲ್ಯಾಟ್, ಈಗ ಶಿಷ್ ಮಹಲ್ ಅದಲ್ಲಿ 25 ರೂಮುಗಳ ಮನೆ, ಕಾರು ಎಸ್ಕಾರ್ಟ್ ಹೀಗೆ ರಾಜನ ರೀತಿ ಆಡಳಿತ ನಡೆಸುತ್ತಿರುವ ಕೇಜ್ರಿವಾಲ್ ಅವರನ್ನು ನೋಡಿ ಜನ ಬೇಸತ್ತಿದ್ದಾರೆ. ಕೇಜ್ರಿವಾಲ್ ಕ್ರೇಜ್ ಕಳೆದುಕೊಂಡಿದ್ದಾರೆ. ಹಾಗಾಗಿ ಇಂದು ದೆಹಲಿಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವಾಗಿದೆ ಎಂದು ಹೇಳಿದರು.
ಯಮುನಾನದಿ ಸ್ವಚ್ಛಗೊಳಿಸುವ ಕೆಲಸ ಮಾಡದೇ, ನಿರ್ವಹಣೆ ಮಡದೇ ನದಿ ಮೇಲೆ ಆಪಾದನೆ ಹಾಕಿದರು. ಇದೇ ಅವರ ಸೋಲಿಗೆ ಕಾರಣವಾಗಿದೆ ಎಂದು ಹೇಳಿದರು.