ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಡಿ.ಕೆ.ಸುರೇಶ್ ಕಾಣೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಬೆಂಗಳೂರು ಗ್ರಾಮಾಂತರಕ್ಕೆ ಹೃದಯವಂತ ಡಾ.ಮಂಜುನಾಥ್ ಬಂದಿದ್ದಾರೆ. ಹೃದಯವಂತ ಬರುತ್ತಿದ್ದಂತೆ ಹೃದಯವಿಲ್ಲದ ಡಿ.ಕೆ.ಸುರೇಶ್ ಕಾಣೆಯಾಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೃದಯವಂತರು. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಗಿಮಿಸುತ್ತಿದ್ದಂತೆ ಹೃದಯವಿಲ್ಲದ ಕಟುಕರು ಡಿ.ಕೆ.ಸುರೇಶ್ ಕಾಣೆಯಾಗಿಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಎಲ್ಲೂ ಕೂಡ ಮೈನಸ್ ಅನ್ನುವುದು ಇಲ್ಲ. ಎಲ್ಲಾ ಕಡೆ ಪ್ಲಸ್ ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸೋಲುವುದು ಖಚಿತ ಎಂದರು.