ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ಖಾತೆಗೆ ಮಾಸಾಶನ ಜಮಾ ಮಾಡಲಾಗುವುದು. ಹೀಗೆ ಜಮಾ ಆದ ಮೊತ್ತವನ್ನು ಸತತ 9 ತಿಂಗಳ ಕಾಲ ಬ್ಯಾಂಕ್ ಖಾತೆಯಿಂದ ವಿತ್ ಡ್ರಾ ಮಾಡದಿದ್ದರೆ ಅಂತಹ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಗುವುದು ಎನ್ನಲಾಗಿದೆ.
ರಾಜ್ಯದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ನೀಡಲಾಗುತ್ತಿದೆ. ಇದನ್ನೇ ಜೀವನಾಧಾರ ಮಾಡಿಕೊಂಡಿರುವ ಫಲಾನುಭವಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಂದ ಹಾಗೇ ಇದಕ್ಕೆ ಕಾರಣ ಕಂದಾಯ ಸಚಿವ ಆರ್. ಅಶೋಕ್ ಅವರ ಹೇಳಿಕೆ ಎನ್ನಲಾಗಿದೆ.
ಸಚಿವರು, ಸತತ 9 ತಿಂಗಳಿಂದ ಪಿಂಚಣಿ ಹಣ ವಿತ್ ಡ್ರಾ ಮಾಡದ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸುವುದಾಗಿ ಹೇಳಿದ್ದು, ಇದಕ್ಕೆ ಹಿರಿಯ ನಾಗರಿಕರು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಕೊರೋನಾ, ಜನಸಂದಣಿ, ಬ್ಯಾಂಕ್ ಗೆ ಹೋಗಿ ಬರುವ ಸಮಸ್ಯೆ ಇವೇ ಮೊದಲಾದ ಕಾರಣಗಳಿಂದ ಹಿರಿಯ ನಾಗರಿಕರು ಬ್ಯಾಂಕಿಗೆ ಸರಿಯಾಗಿ ಹೋಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ ಎಂದು ಹೇಳಲಾಗಿದೆ.