ಬೆಂಗಳೂರು: ಸೊಪ್ಪಿನಬೆಟ್ಟ, ಜಮ್ಮಾ-ಬಾಣೆಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರ ಜಮೀನಿಗೆ ದರ ನಿಗದಿಪಡಿಸಿ ರೈತರಿಗೆ ಮಂಜೂರು ಮಾಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಆರ್. ಪ್ರಸನ್ನ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸೊಪ್ಪಿನಬೆಟ್ಟ, ಜಮ್ಮಾ -ಬಾಣೆ ಸಾವಿರಾರು ಎಕರೆ ಜಮೀನು ರೈತರ ಸ್ವಾಧೀನದಲ್ಲಿದೆ. ಸುಮಾರು 70 ವರ್ಷಗಳಿಂದ ಅವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಅದಕ್ಕೆ ದರ ನಿಗದಿಪಡಿಸಿ ರೈತರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಸೇರಿದ ಸಾವಿರಾರು ಎಕರೆ ಸೊಪ್ಪಿನಬೆಟ್ಟ, ಜಮ್ಮಾ-ಬಾಣೆ ಜಮೀನು ಇದ್ದು ಸುಮಾರು 70 ವರ್ಷಗಳಿಂದ ರೈತರ ಸ್ವಾಧೀನದಲ್ಲಿದೆ. ಇದಕ್ಕೆ ಅಂತಿಮ ರೂಪ ನೀಡಲು ಸಮಿತಿ ರಚಿಸಿದ್ದು ಬೆಲೆ ನಿಗದಿಪಡಿಸಿ ಸಂಬಂಧಿತ ರೈತರಿಗೆ ಮಂಜೂರು ಮಾಡುವ ಪ್ರಸ್ತಾಪವಿದೆ. ಆದಷ್ಟು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.