ಬೆಂಗಳೂರು: ಸಚಿವ ಆರ್. ಅಶೋಕ್ ಅವರಿಗೆ ಕನಕಪುರ ಹಾಗೂ ಪದ್ಮನಾಭನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಎದುರಿಸಲಿರುವ ಅಶೋಕ್ ಸ್ವಕ್ಷೇತ್ರ ಪದ್ಮನಾಭನಗರದಲ್ಲಿ ಸಂಸದ ಡಿ.ಕೆ. ಸುರೇಶ್ ಅವರನ್ನು ಎದುರಿಸುವ ಸಾಧ್ಯತೆ ಇದೆ.
ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಅವರಿಗೆ ಇಂದು ಬಿ ಫಾರಂ ನೀಡಿಲ್ಲ. ಡಿ.ಕೆ. ಶಿವಕುಮಾರ್ ಕೊಠಡಿಯಲ್ಲಿ ಕಾದು ರಘುನಾಥ ನಾಯ್ಡು ವಾಪಸ್ ತೆರಳಿದ್ದಾರೆ. ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಘುನಾಥ ನಾಯ್ಡು ನಾಳೆ ಬಿ ಫಾರಂ ಪಡೆಯುತ್ತೇನೆ ಎಂದು ತೆರಳಿದ್ದಾರೆ.
ಕ್ಷೇತ್ರ ತ್ಯಾಗ:
ಡಿ.ಕೆ. ಸುರೇಶ್ ಸ್ಪರ್ಧೆ ಮಾಡಿದರೆ ನಾನೇ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಪದ್ಮನಾಭನಗರ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಹೇಳಿದ್ದಾರೆ.
ಡಿ.ಕೆ. ಸುರೇಶ್ ಸ್ಪರ್ಧಿಸಿದರೆ 70 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಈ ಬಗ್ಗೆ ಡಿ.ಕೆ. ಸುರೇಶ್ ಅವರ ಬಳಿ ಹೇಳಿದ್ದೇನೆ. ಹೇಗೆ ಗೆಲ್ಲಬಹುದು ಎಂದು ವಿವರ ಕೊಟ್ಟಿದ್ದೇನೆ. ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಇಬ್ಬರು ಕಾಂಗ್ರೆಸ್ ಆಸ್ತಿಯಾಗಿದ್ದಾರೆ. ಅಶೋಕ್ ಎರಡು ಕ್ಷೇತ್ರಗಳಲ್ಲಿಯೂ ಸೋಲುತ್ತಾರೆ. ಕನಕಪುರದಲ್ಲಿ ಮೂರನೇ ಸ್ಥಾನಕ್ಕೆ ಕುಸಿಯುತ್ತಾರೆ ಎಂದು ಹೇಳಿದ್ದಾರೆ.