ಬೆಂಗಳೂರು: ಕೃಷಿ ಪಂಪ್ ಸೆಟ್ ಸಬ್ಸಿಡಿ ಬಗ್ಗೆ ರಾಜ್ಯ ಸರ್ಕಾರ ಪರಾಮರ್ಶೆ ನಡೆಸುತ್ತಿರುವ ವಿಚಾರವಾಗಿ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ಬಿಪಿಎಲ್ ಕಾರ್ಡ್ ರದ್ದು ಬಳಿಕ ಈಗ ರೈತರ ಮೇಲೂ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾಯ್ತು, ಈಗ ಕೃಷಿ ಪಂಪ್ ಸೆಟ್ ಸಬ್ಸಿಡಿ ಪಡೆಯುತ್ತಿರುವ ರೈತರ ಮೇಲೆ ಬಿದ್ದಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮಗೆ ಹಣಕಾಸು ನಿರ್ವಹಣೆ ಮಾಡಲು ಕೈಲಾಗದಿದ್ದಾರೆ ರಾಜೀನಾಮೆ ಕೊಟ್ಟು ನಿರ್ಗಮಿಸಿ. ದುಡ್ಡು ಉಳಿಸುವ ನೆಪದಲ್ಲಿ ಅನ್ನದಾತರಿಗೆ ಸಿಗುತ್ತಿರುವ ಸಬ್ಸಿಡಿಗೆ ಕತ್ತರಿ ಹಾಕುವ ಪಾಪದ ಕೆಲಸ ಮಾಡಬೇಡಿ ಎಂದು ಗುಡುಗಿದ್ದಾರೆ.