ಬೆಂಗಳೂರು: ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ವಿಪಕ್ಷ ಬಿಜೆಪಿ ನಾಯಕರು, ಕಾರ್ಯಕರ್ತರು ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಪರಿಷತ್ ಸದಸ್ಯ ರವಿ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದೆ. ಈ ವೇಳೆ ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ್ದಾರೆ. ಪೊಲೀಸರು ಆರ್.ಅಶೋಕ್ ಹಾಗೂ ಬಿಜೆಪಿ ನಾಯಕರನ್ನು ತಡೆಯುತ್ತಿದ್ದಂತೆ ಆರ್.ಅಶೋಕ್ ಪೊಲೀಸರ ಮೇಲೆ ರೋಷಾವೇಷ ವ್ಯಕ್ತಪಡಿಸಿದ್ದಾರೆ.
ನಾವೇನು ಇಲ್ಲಿ ಪ್ರತಿಭಟನೆ ಮಾಡಲು ಬಂದಿಲ್ಲ. ನಾವು ನಿಂತಿರುವ ಜಾಗಕ್ಕೂ ಟ್ಯಾಕ್ಸ್ ಕಟ್ಟಬೇಕಾ? ನಾವು ಪ್ರಯಾಣಿಕರಿಗೆ ಗುಲಾಬಿ ಹೂ ನೀಡಲು ಬಂದಿದ್ದೇವೆ. ನಮ್ಮನ್ನು ಬಂದಿಸುತ್ತಿದ್ದೀರಾ? ನಮ್ಮನ್ನು ಅರೆಸ್ಟ್ ಮಾಡಿ ಸೆಂಟ್ರಲ್ ಜೈಲಿಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಸಮಾಧಾನ ಪಡಿಸಲು ಮುಂದಾಗಿತ್ತಿದ್ದಂತೆ ಇನ್ಸ್ ಪೆಕ್ಟರ್ ಮಾರುತಿ ಎಂಬ ಹಿರಿಯ ಪೊಲೀಸರೊಬ್ಬರ ಮೇಲೆ ಬಂಧಿಸಲು ಮುಂದಾದರೆ ಎಚ್ಚರ. ಮುಂದೇ ಇದೇ ಸರ್ಕಾರ ಇರಲ್ಲ ಹುಷಾರ್! ಎಂದು ಆವಾಜ್ ಹಾಕಿದ್ದಾರೆ. ಈ ಹಿಂದೆ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಆರ್.ಅರೋಶ್, ಪೊಲೀಸರ ಮೇಲೆಯೇ ದರ್ಪ ಮೆರೆದು ಆವಾಜ್ ಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.