ಕೋವಿಡ್ ಸೋಂಕು ಅಪ್ಪಳಿಸಿ ಒಂದೂವರೆ ವರ್ಷದ ಬಳಿಕವೂ ಈ ವೈರಸ್‌ನ ಅನೇಕ ಅವತಾರಗಳು ಭೀತಿ ಸೃಷ್ಟಿಸುವುದನ್ನು ಮುಂದುವರೆಸಿವೆ.
ಸದ್ಯದ ಮಟ್ಟಿಗೆ ದೇಶದೆಲ್ಲೆಡೆ ಡೆಲ್ಟಾವತಾರಿ ಕೋವಿಡ್ ಆತಂಕ ಹುಟ್ಟಿಸುತ್ತಿದ್ದರೆ ಇದೀಗ ಆರ್.1 ಅವತಾರಿ ವೈರಾಣುವಿನ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ಜಪಾನ್‌ನಲ್ಲಿ ಮೊದಲ ಬಾರಿಗೆ ಆರ್.1 ಅವತರಣಿಕೆಯ ವೈರಸ್ ಅನ್ನು ಪತ್ತೆ ಮಾಡಲಾಗಿದ್ದು, ಇದು ಇತ್ತೀಚೆಗಷ್ಟೇ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 35ಕ್ಕೂ ಹೆಚ್ಚು ದೇಶಗಳ 10,000 ರೋಗಿಗಳು ಈ ಅವತಾರದ ಕೋವಿಡ್ ವೈರಸ್‌ನಿಂದ ಬಾಧಿತರಾಗಿದ್ದಾರೆ.
ಪಪ್ಪಾಯ ಅತಿ ಹೆಚ್ಚು ಸೇವಿಸುವುದರಿಂದ ಉಂಟಾಗುತ್ತೆ ಈ ಪರಿಣಾಮ
ಏಪ್ರಿಲ್ 2021ರಿಂದಲೂ ಆರ್.1 ಅವತಾರಿ ಕೋವಿಡ್ ವೈರಾಣು ಅಮೆರಿದಲ್ಲಿದ್ದು, ಕೆಂಟುಕಿಯ ನರ್ಸಿಂಗ್ ಹೋಂ ಒಂದರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿದೆ.
ಕೋವಿಡ್‌ನ ಇತರೆ ವೈರಾಣುಗಳಿಗೆ ಕಾಣಿಸಿಕೊಳ್ಳುವ ರೋಗ ಲಕ್ಷಣಗಳಿಗೆ ಸಾಮ್ಯವಾದ ರೋಗ ಲಕ್ಷಣಗಳು ಆರ್.1 ವೈರಸ್‌ನ ವಿಚಾರದಲ್ಲೂ ಕಂಡುಬರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.