ಭಾರತೀಯ ಸ್ಮಾರಕಗಳ ಬಗೆಗಿನ ಗೊಂದಲ ದಿನ ದಿನಕ್ಕೂ ಬಿಸಿ ಹೆಚ್ಚಾಗ್ತಾ ಹೋಗ್ತಿದೆ. ಇದೇ ಸಮಯದಲ್ಲಿ ಈಗ ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರ್ಮವೀರ್ ಶರ್ಮಾ, ಭಾರತದಲ್ಲಿರೋ ಇನ್ನೊಂದು ಪ್ರಸಿದ್ಧ ಸ್ಮಾರಕದ ಹಿಂದಿನ ರಹಸ್ಯವನ್ನ ಬಯಲು ಮಾಡಿದ್ದಾರೆ.
5ನೇ ಶತಮಾನದಲ್ಲಿ ರಾಜಾ ವಿಕ್ರಮಾದಿತ್ಯ, ಸೂರ್ಯನ ಬದಲಾಗುವ ಸ್ಥಾನವನ್ನು ವೀಕ್ಷಿಸಲು ಕುತುಬ್ ಮಿನಾರ್ನಿರ್ಮಿಸಿದ್ದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಾಜಿ ಅಧಿಕಾರಿಯಾಗಿದ್ದ ಧರ್ಮಸಿಂಗ್ ಅವರು ಹೇಳಿದ್ದಾರೆ. ಸೂರ್ಯನ ಉಗಮ, ಅಸ್ತಮ ಹಾಗೂ ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ನಿರ್ಮಿಸಿರೋ ಸ್ಮಾರಕವಾಗಿದೆಯೇ ಹೊರತು ಇದನ್ನು ಕುತುಬ್ ಅಲ್-ದಿನ್ ಐಬಕ್ ನಿರ್ಮಿಸಿಲ್ಲ ಅಂತ ಹೇಳಿದ್ದಾರೆ.
ಶುಭ ಸುದ್ದಿ: 300 ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ
ಈ ಕುತುಬ್ ಮಿನಾರ್ ಗೋಪುರ ಕೊಂಚ ವಾಲಿದೆ. ಇದು ಸೂರ್ಯನ ಚಲನವಲನ ವೀಕ್ಷಣೆಗೆಂದೇ ಕಟ್ಟಿರೋದು ಅಂತ ಹೇಳಿರೋ ಅವರು ಜೂನ್ 21ರಂದು ಅಯನ ಸಂಕ್ರಾತಿಯ ನಡುವೆ, ಆ ಪ್ರದೇಶದ ಮೇಲೆ ಕನಿಷ್ಠ ಅರ್ಧ ಗಂಟೆ ನೆರಳು ಬೀಳುವುದಿಲ್ಲ. ಇದು ವಿಜ್ಞಾನ ಹಾಗೂ ಪುರಾತತ್ವ ಶಾಸ್ತ್ರದ ಸತ್ಯ ಅಂತ ಹೇಳಿದ್ದಾರೆ.
ಕುತುಬ್ಮಿನಾರ್ ಒಂದು ಸ್ವತಂತ್ರವಾದ ಕಲ್ಪನೆ, ಆ ಕಲ್ಪನೆಗೆ ರೂಪ ಕೊಟ್ಟಿರೋದು ರಾಜಾ ವಿಕ್ರಮಾದಿತ್ಯ ಅನ್ನೋದು ಸತ್ಯ. ಇದು ಅಲ್ಲೇ ಇರುವ ಮಸೀದಿಗೆ ಯಾವುದೇ ರೀತಿಯಾಗಿಯೂ ಸಂಬಂಧಪಟ್ಟಿಲ್ಲ. ಈ ಕುತುಬ್ಮಿನಾರ್ ಇನ್ನೊಂದು ಸ್ಪೆಶಾಲಿಟಿ ಏನಂದ್ರೆ, ರಾತ್ರಿ ಸಮಯದಲ್ಲಿ ಆಕಾಶದಲ್ಲಿ ಧ್ರುವ ನಕ್ಷತ್ರವನ್ನು ನೋಡಲು ಸಹಾಯವಾಗಿದೆ ಎಂದು ತಿಳಿಸಿದರು.