ಅಡ್ವಾನ್ಸ್ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಮಹತ್ವದ ತೀರ್ಪು ನೀಡಿದೆ. ಇದು ವಿವಿಧ ಉದ್ಯೋಗಿಗಳ ಸೇವೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ನೋಟಿಸ್ ಪೇ, ಗುಂಪು ವಿಮೆ ಮತ್ತು ದೂರವಾಣಿ ಬಿಲ್‌ಗಳ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಎಎಆರ್ ಹೇಳಿದೆ.
ಭಾರತ್ ಪೆಟ್ರೋಲಿಯಂನ ಅಂಗಸಂಸ್ಥೆಯಾದ ಭಾರತ್ ಓಮನ್ ರಿಫೈನರೀಸ್‌ಗೆ ಸಂಬಂಧಿಸಿದ ಪ್ರಕರಣವನ್ನು ಎಎಆರ್ ವಿಚಾರಣೆ ನಡೆಸಿದೆ. ಈ ವೇಳೆ ಎಎಆರ್ ಮಹತ್ವದ ತೀರ್ಪು ನೀಡಿದೆ. ನೋಟಿಸ್ ಅವಧಿಗೆ ಪಡೆದ ಸಂಬಳದ ಮೇಲೆ ಉದ್ಯೋಗಿ ಜಿ.ಎಸ್.ಟಿ. ಪಾವತಿಸಬೇಕೆಂದು ಎಎಆರ್ ಹೇಳಿದೆ.
ಎಕನಾಮಿಕ್ ಟೈಮ್ಸ್ ನ ವರದಿಯ ಪ್ರಕಾರ, ನೋಟಿಸ್ ಪಾವತಿಯ ವಿಷಯದಲ್ಲಿ ಕಂಪನಿಯು ಉದ್ಯೋಗಿಗೆ ಸೇವೆಯನ್ನು ಒದಗಿಸುತ್ತಿದೆ. ಆದ್ದರಿಂದ ಅಂತಹ ವಹಿವಾಟುಗಳ ಮೇಲೆ ಜಿ.ಎಸ್.ಟಿ. ಅನ್ವಯಿಸಬೇಕು ಎಂದು ಎಎಆರ್ ಸೂಚಿಸಿದೆ. ನೋಟಿಸ್ ಪಾವತಿಗಳ ಮೇಲೆ ಜಿ.ಎಸ್.ಟಿ. ಅನ್ವಯಿಸುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಜುಲೈ 2020 ರಲ್ಲಿ, ಗುಜರಾತ್ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಸಹ ಇದೇ ರೀತಿಯ ಆದೇಶವನ್ನು ಜಾರಿಗೊಳಿಸಿತ್ತು. ಇದರಲ್ಲಿ ಅಹಮದಾಬಾದ್‌ನ ಆಮ್ನಿಯಲ್ ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ತೊರೆಯುವ ಉದ್ಯೋಗಿಗಳಿಂದ ನೋಟಿಸ್ ಸಮಯದಲ್ಲಿ ಶೇಕಡಾ 18ರಷ್ಟು ಜಿ.ಎಸ್.ಟಿ. ಪಾವತಿಸುವಂತೆ ಸೂಚನೆ ನೀಡಲಾಗಿತ್ತು.