ಕಚೇರಿಯಿಂದ ದಣಿದು ಬಂದವರಿಗೆ ಬಿಸಿಬಿಸಿ ರುಚಿರುಚಿ ಆಹಾರ ಸೇವನೆ ಮಾಡಬೇಕು ಎನ್ನಿಸೋದು ಸಹಜ. ಟೀ ಜೊತೆ ಸ್ನ್ಯಾಕ್ಸ್ ಇದ್ರೆ ಟೀ ರುಚಿ ಹೆಚ್ಚುತ್ತೆ. ಈಗ ನಾವು ಹೇಳುವ ರೆಸಿಪಿ ಹೊಟ್ಟೆ ತುಂಬುವ ಜೊತೆಗೆ ರುಚಿರುಚಿಯೂ ಹೌದು, ಆರೋಗ್ಯಕರವೂ ಹೌದು.
ಚಟ್ ಪಟಿ ಮೊಳಕೆ ಕಾಳಿಗೆ ಬೇಕಾಗುವ ಪದಾರ್ಥ :
2 ಕಪ್ ಬೇಯಿಸಿದ ಮೊಳಕೆ ಕಾಳುಗಳು
1 ಬೇಯಿಸಿದ ಆಲೂಗಡ್ಡೆ
1 ಕಪ್ ನೆನೆಸಿ ಬೇಯಿಸಿದ ಕಾಬೂಲ್ ಕಡಲೆ
1 ಸಣ್ಣ ಕ್ಯಾಪ್ಸಿಕಂ
1 ಸಣ್ಣ ಮೆಣಸಿನ ಕಾಯಿ
1 ಸಣ್ಣಗೆ ಕತ್ತರಿಸಿದ ಈರುಳ್ಳಿ
1 ಸಣ್ಣಗೆ ಕತ್ತರಿಸಿದ ಟೋಮೋಟೋ
2 ಚಮಚ ನಿಂಬೆ ರಸ
ರುಚಿಗೆ ತಕ್ಕಷ್ಟು ಚಾಟ್ ಮಸಾಲೆ
ರುಚಿಗೆ ತಕ್ಕಷ್ಟು ಉಪ್ಪು
ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು
ಚಟ್ ಪಟಿ ಮೊಳಕೆ ಕಾಳು ಮಾಡುವ ವಿಧಾನ :
ಮೊದಲು ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿ. ನಂತ್ರ ಒಂದು ದೊಡ್ಡ ಪಾತ್ರೆಗೆ ಬೇಯಿಸಿದ ಮೊಳಕೆ ಕಾಳು, ಆಲೂಗಡ್ಡೆ, ಕಾಬೂಲ್ ಕಡಲೆ, ಕತ್ತರಿಸಿದ ಕ್ಯಾಪ್ಸಿಕಂ, ಕತ್ತರಿಸಿದ ಮೆಣಸಿನ ಕಾಯಿ, ಈರುಳ್ಳಿ, ಟೋಮೋಟೋ, ನಿಂಬೆ ರಸ, ಚಾಟ್ ಮಸಾಲೆ ಹಾಗೂ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ. ನಂತ್ರ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿ ಸರ್ವ್ ಮಾಡಿ.