ರಾಣಿ ಎಲಿಜಬೆತ್ ನಿಧನದಿಂದ ಬ್ರಿಟನ್ ಶೋಕ ಸಾಗರದಲ್ಲಿ ಮುಳುಗಿದ್ದು, ಅಂತಿಮ ವಿಧಿವಿಧಾನಗಳು ಆರಂಭವಾಗಿದೆ.
ಬುಧವಾರ ಮಧ್ಯಾಹ್ನ 2-22 ಕ್ಕೆ ಜನ ಪ್ರವಾಹದ ನಡುವೆ ರಾಣಿ ಎಲಿಜಬೆತ್2 ಅವರ ಪಾರ್ಥಿವ ಶರೀರದ ಕಾಫಿನ್ (ಶವಪೆಟ್ಟಿಗೆ) ಅನ್ನು ಬಕಿಂಗ್ ಹ್ಯಾಮ್ ಅರಮನೆಯಿಂದ ಹೊರಟಿತು.
ಅರಮನೆಯಿಂದ ಹೊರಡುವ ಸಮಯವು ಒಂದು ನಿಮಿಷ ಆಚೀಚೆ ಆಗಲಿಲ್ಲ, ರಾಣಿಯ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಿಖರವಾಗಿ ಮಧ್ಯಾಹ್ನ 2:22ಕ್ಕೆ ಹೊರಟಿತು. ಇದೇ ಸಮಯಕ್ಕೆ ಏಕೆ ಎಂಬ ಕುತೂಹಲ ಅನೇಕರಲ್ಲಿದೆ.
ಬಕಿಂಗ್ಹ್ಯಾಮ್ ಅರಮನೆಯು ವೆಸ್ಟ್ಮಿನಿಸ್ಟರ್ ಹಾಲ್ಗೆ ಹೊರಡಲು ನಿರ್ದಿಷ್ಟ ಸಮಯವನ್ನು ಆಯ್ಕೆಮಾಡುವುದರ ಹಿಂದೆ ಯಾವುದೇ ಸ್ಪಷ್ಟ ಕಾರಣವನ್ನು ದೃಢಪಡಿಸದಿದ್ದರೂ, ಸ್ಥಳೀಯ ಮಾಧ್ಯಮ ವರದಿಯು ರಾಣಿ ಎಲಿಜಬೆತ್2 ಅವರ ತಂದೆ ಕಿಂಗ್ ಜಾರ್ಜ್ಗೆ ಗೌರವ ಸಲ್ಲಿಸಲು ಇರಬಹುದೆಂದು ಉಲ್ಲೇಖಿಸಿದೆ.
ಕಿಂಗ್ ಜಾರ್ಜ್1 ಅವರ ಮರಣದ ನಂತರ, ವೆಸ್ಟ್ಮಿನ್ಸ್ಟರ್ನಲ್ಲಿ ಗಂಟೆಗಳು ಧ್ವನಿಸಿದವು ಮತ್ತು ರಾಜರು ಸತ್ತಾಗ ಮಾತ್ರ ಬಾರಿಸುವ ಸೆಬಾಸ್ಟೊಪೋಲ್ ಬೆಲ್ 56 ಬಾರಿ ಮೊಳಗಿತ್ತು. ಅವರ ಜೀವನ ಪ್ರತಿ ವರ್ಷಕ್ಕೆ ಒಂದು ಬೆಲ್ ಲೆಕ್ಕದಲ್ಲಿ 56 ಬಾರಿ ಮೊಳಗಿಸಲಾಗಿತ್ತು. ಸರಿಯಾಗಿ ಮಧ್ಯಾಹ್ನ 2:22ಕ್ಕೆ ಗಂಟೆಗಳು ಮೊಳಗುವುದನ್ನು ನಿಲ್ಲಿಸಿದ್ದವು.
ಈ ಸಮಯದ ಹಿಂದಿನ ಮತ್ತೊಂದು ಸಂಭವನೀಯ ಕಾರಣವೆಂದರೆ ಫೆಬ್ರವರಿಯಲ್ಲಿ ಆಚರಿಸಲಾದ ರಾಜನ ಪ್ಲಾಟಿನಂ ಜುಬಿಲಿಯೊಂದಿಗೆ ಸಂಪರ್ಕವಿರಬಹುದು ಎಂದು ಊಹಿಸಲಾಗಿದೆ.
ರಾಜಮನೆತನದ ಬಯೋಗ್ರಾಫರ್ ರಾರ್ಬಟ್ ಲೇಸಿ ಸಮಯದ ಬಗ್ಗೆ ಯಾವುದೆ ಖಚಿತತೆ ಇಲ್ಲ ಎಂದಿದ್ದಾರೆ. ಶವಪೆಟ್ಟಿಗೆಯು ಮಧ್ಯಾಹ್ನ 3 ಗಂಟೆಗೆ ವೆಸ್ಟ್ಮಿನಿಸ್ಟರ್ ಹಾಲ್ಗೆ ತರುವುದನ್ನು ಖಚಿತಪಡಿಸಿಕೊಳ್ಳಲು ಮಧ್ಯಾಹ್ನ 2:22 ಕ್ಕೆ ಅರಮನೆಯಿಂದ ಹೊರಟಿತು ಎಂದಿದ್ದಾರೆ.
ಕೆಲವು ಕ್ರೈಸ್ತರಿಗೆ 222 ಸಂಖ್ಯೆಯು ವಿಶೇಷ ಸ್ಥಾನವನ್ನು ಹೊಂದಿದೆ. ಏಕೆಂದರೆ ಇದು ಏಕತೆ, ಪ್ರೀತಿ ಮತ್ತು ದೇವರೊಂದಿಗಿನ ವೈಯಕ್ತಿಕ ಸಂಬಂಧವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಜೀಸಸ್ ಸಹ ಮಧ್ಯಾಹ್ನ 3 ಗಂಟೆಗೆ ಶಿಲುಬೆಯ ಮೇಲೆ ನಿಧನರಾದರು ಎಂದು ನಂಬಲಾಗಿದೆ.
ರಾಣಿ ಎಲಿಜಬೆತ್ 2ರ ಅಂತ್ಯಕ್ರಿಯೆ ಸೆಪ್ಟೆಂಬರ್ 19ರ ಸೋಮವಾರದಂದು ನೆರವೇರಲಿದ್ದು, ಅಲ್ಲಿವರೆಗೂ ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ಸಾರ್ವಜನಿಕರಿಗೆ ಅಂತಿಮ ಗೌರವ ಸಲ್ಲಿಸಲು ಅವಕಾಶವಿದೆ.