ಜೇನುಹುಳ ಕಿವಿ ಹತ್ತಿರ ಬಂದು ಗುಂಯ್ ಅಂದರೇನೆ ಸಾಕು. ಎಲ್ಲಿ ಕಚ್ಚಿ ಬಿಡುತ್ತೋ ಎಂಬ ಭಯ ಶುರುವಾಗುತ್ತೆ. ಅಂತದ್ರಲ್ಲಿ ಮಹಿಳೆಯೊಬ್ಬಳು ಬರಿಗೈನಲ್ಲಿ ಜೇನು ಗೂಡಿಗೆ ಕೈ ಹಾಕಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರೌಂಡ್ಸ್ ಹಾಕುತ್ತಿದೆ.
ಜೇನು ಸಾಕಣಿಕಾ ಉದ್ಯಮವನ್ನ ಮಾಡ್ತಿರೋ ಟೆಕ್ಸಾಸ್ನ ಎರಿಕಾ ಥಾಂಪ್ಸನ್ ಈ ರೀತಿಯ ಸಾಹಸ ಮಾಡಿದ ಮಹಿಳೆ ಆಗಿದ್ದಾರೆ. ಈ ವಿಡಿಯೋವನ್ನ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿದ್ದು ಇದನ್ನ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಜೇನು ಹುಳುಗಳ ಗುಂಪು ಕೊಡೆಯೊಂದರ ಅಡಿಯಲ್ಲಿ ಸೇರಿಸಿಕೊಂಡಿದ್ದವು. ಅಪಾರ್ಟ್ಮೆಂಟ್ನ ನಿವಾಸಿಗಳು ಎರಿಕಾ ಬಳಿ ಈ ಜೇನುಹುಳುಗಳನ್ನ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸುವಂತೆ ಕೇಳಿಕೊಂಡಿದ್ದರಂತೆ. ಆದರೆ ಎರಿಕಾ ಸ್ಥಳಕ್ಕೆ ಹೋಗಿ ನೋಡಿದ ವೇಳೆ ಅವುಗಳಿಗೆ ಮನೆಯ ಜೊತೆಗೆ ರಾಣಿ ಜೇನಿನ ಅವಶ್ಯಕತೆಯೂ ಇದೆ ಅನ್ನೋದು ಎರಿಕಾಗೆ ತಿಳಿದುಬಂದಿದೆ.
ವಿಡಿಯೋದಲ್ಲಿ ಎರಿಕಾ ಅತ್ಯಂತ ನಾಜೂಕಾಗಿ ಜೇನುಹುಳಗಳನ್ನ ಪೆಟ್ಟಿಗೆಗೆ ಹಾಕುತ್ತಿರೋದನ್ನ ನೀವು ನೋಡಬಹುದಾಗಿದೆ. ರಕ್ಷಣೆ ಮಾಡಲು ಅವುಗಳ ಬಳಿ ಏನೂ ಇಲ್ಲ ಎಂದಾದಾಗ ಜೇನುಹುಳುಗಳು ಸೌಮ್ಯವಾಗಿ ಇರುತ್ತವೆ. ಮರಿ ಜೇನುಹುಳು, ಜೇನು ತುಪ್ಪ, ಗೂಡು ಎಲ್ಲಕ್ಕಿಂತ ಮುಖ್ಯವಾಗಿ ರಾಣಿ ಜೇನು ಇದ್ದಾಗ ಮಾತ್ರ ಅವು ಪರಾಕ್ರಮವನ್ನ ಪ್ರದರ್ಶಿಸುತ್ತವೆ ಎಂದು ಎರಿಕಾ ವಿಡಿಯೋದಲ್ಲಿ ವಿವರಿಸಿದ್ದಾರೆ.
ಎಲ್ಲಾ ಜೇನುಹುಳುಗಳನ್ನ ಪೆಟ್ಟಿಗೆಗೆ ಸ್ಥಳಾಂತರಿಸಿದ ಬಳಿಕ ಇವುಗಳಿಗೆ ರಾಣಿ ಜೇನು ಇಲ್ಲ ಅನ್ನೋ ವಿಚಾರ ಎರಿಕಾಗೆ ತಿಳಿದಿದೆ. ರಾಣಿ ಜೇನು ಇಲ್ಲದೇ ಇವುಗಳು ಬದಕಲು ಸಾಧ್ಯವಿಲ್ಲ. ಹೀಗಾಗಿ ಹೊಸ ರಾಣಿ ಜೇನನ್ನ ಈ ಪರಿವಾರಕ್ಕೆ ಎರಿಕಾ ಸೇರಿಸಿದ್ದಾರೆ. ರಾಣಿ ಜೇನನ್ನ ಒಪ್ಪಿಕೊಂಡ ಬಳಿಕ ಅವು ಸಾಮಾನ್ಯರಂತೆ ಕೆಲಸ ಮಾಡಲು ಆರಂಭಿಸಿವೆ.
https://www.facebook.com/TexasBeeworks/videos/4038023426266877/?t=56