ಬೆಂಗಳೂರು: ಚಾಲನಾ ಪರವಾನಿಗೆ(ಡಿಎಲ್) ಮತ್ತು ವಾಹನಗಳ ನೋಂದಣಿ(ಆರ್.ಸಿ.) ಸ್ಮಾರ್ಟ್ ಕಾರ್ಡ್ ಗಳನ್ನು ಇನ್ನಷ್ಟು ಹೈಟೆಕ್ನಾಲಜಿಯೊಂದಿಗೆ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. 2024ರ ಫೆಬ್ರವರಿ ಅಥವಾ ಮಾರ್ಚ್ ಬಳಿಕ ರಾಜ್ಯದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ.
ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಡಿಜಿಟಲ್ ವ್ಯವಸ್ಥೆ ಹೊಸ ಯೋಜನೆಯ ಸೌಲಭ್ಯಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸರ್ಕಾರದ ಏಜೆನ್ಸಿ ಒಂದಕ್ಕೆ ಸಾರಿಗೆ ಇಲಾಖೆ ಜವಾಬ್ದಾರಿ ನೀಡಿದೆ. ಡಿಎಲ್ ನ ಮುಂಭಾಗದಲ್ಲಿ ಹೆಸರು, ಫೋಟೋ, ವಿಳಾಸ, ಜನ್ಮ ದಿನಾಂಕ, ರಕ್ತದ ಗುಂಪು ಇರುತ್ತದೆ. ಹಿಂಭಾಗದಲ್ಲಿ ಮೊಬೈಲ್ ನಂಬರ್ ವಾಹನ ಚಲಾಯಿಸಲಿರುವ ಅನುಮತಿ ವಿವರ ಇರಲಿದೆ.
ಹೊಸ ಆರ್.ಸಿ. ಕಾರ್ಡ್ ಮುಂಭಾಗದಲ್ಲಿ ವಾಹನ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಅವಧಿ ಮುಕ್ತಾಯ, ಚಾಸ್ಸಿ ನಂಬರ್, ಇಂಜಿನ್ ನಂಬರ್ ಇರಲಿದೆ. ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿ ವಾಹನಕ್ಕೆ ಸಂಬಂಧಿಸಿದ ವಿವರಗಳನ್ನು ನಮೂದಿಸಲಾಗುವುದು. ಸ್ಮಾರ್ಟ್ ಕಾರ್ಡ್ ನಲ್ಲಿ ಕ್ಯೂಆರ್ ಕೋರ್ಟ್ ಇರಲಿದೆ. ಇದನ್ನು ಸ್ಕ್ಯಾನ್ ಮಾಡಿದಾಗ ಎಲ್ಲ ಮಾಹಿತಿ ಸಿಗಲಿದೆ. ಇದರಿಂದ ಅಪಾರದ ಚಟುವಟಿಕೆ ತಡೆಗೆ ಮತ್ತು ಅಪಘಾತದ ಸಂದರ್ಭಗಳಲ್ಲಿ ಅನುಕೂಲವಾಗುತ್ತದೆ.
ಈಗ ಸ್ಮಾರ್ಟ್ ಕಾರ್ಡ್ ವಿತರಣೆ ಪಡೆದಿರುವ ಸಂಸ್ಥೆಯ ಗುತ್ತಿಗೆ ಅವಧಿ ಎರಡು ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಕ್ಯೂಆರ್ ಕೋಡ್ ಆಧಾರಿತ ಕಾರ್ಡ್ ಗಳ ವಿತರಣೆಗೆ ಟೆಂಡರ್ ಆಹ್ವಾನಿಸಿ ಅರ್ಹ ಕಂಪನಿಗೆ ಜವಾಬ್ದಾರಿ ನೀಡಲಾಗುವುದು ಎನ್ನಲಾಗಿದೆ.