ಇಂದು ರಕ್ಷಾಬಂಧನ ಹಬ್ಬ. ಅಣ್ಣ-ತಂಗಿಯರ ಬಾಂಧವ್ಯವನ್ನು ಸಾರುವ ಈ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ QR ಕೋಡ್ ಮೆಹಂದಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ.
ರಕ್ಷಾಬಂಧನ ಅಕ್ಕ-ತಂಗಿಯರು ಸಹೋದರನಿಗೆ ರಾಖಿಯನ್ನು ಕಟ್ಟುವ ಮೂಲಕ ಸಹೋದರನ ಶ್ರೇಯಸ್ಸು ಹಾಗೂ ತನ್ನ ರಕ್ಷಣೆಯನ್ನು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಖಿ ಕಟ್ಟುವ ಮೂಲಕ ಸಹೋದರನಿಂದ ಭಾರಿ ಗಿಫ್ಟ್ ಪಡೆಯುವುದು, ಹಣ ಪಡೆಯುವುದು ಕೂಡ ರೂಢಿಯಾಗಿಬಿಟ್ಟಿದೆ. ಇದೀಗ ರಕ್ಷಾಬಂಧನದ ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕ್ಯೂ ಆರ್ ಕೋಡ್ ಮೆಹಂದಿ ನೆಟ್ಟಿಗರ ಗಮನ ಸೆಳೆದಿದೆ.
ಯುವತಿಯ ಕೈ ಮೇಲೆ ಹೆನ್ನಾ ಆರ್ಟ್ ನಲ್ಲಿ ಅದ್ಭುತವಾಗಿ ಮೂಡಿರುವ QR Code ಮೆಹಂದಿ ಸಾಕಷ್ಟು ಕ್ರಿಯೆಟಿವ್ ಆಗಿದೆ. ಕೈ ಮೇಲೆ ಮೂಡಿರುವ ಕ್ಯೂರ್ ಕೋಡ್ ಮೆಹಂದಿ ಆರ್ಟ್ ನ್ನು ಸ್ಕ್ಯಾನರ್ ಆಗಿ ಬಳಸಿ ಹಣ ಸಂದಾಯವನ್ನೂ ಮಾಡಬಹುದು….ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.. ಅದೇನೆ ಇರಲಿ ಕ್ಯೂ ಆರ್ ಕೋಡ್ ನ ಈ ಹೆನ್ನಾ ಆರ್ಟ್ ಕ್ರಿಯೆಟಿವಿಟಿಗೆ ವ್ಹಾವ್…! ಎನ್ನಲೇ ಬೇಕು.