ಪ್ರವಾಸಿಗರು ಇರುವ ಕಾರೊಂದರಲ್ಲಿ ಹೆಬ್ಬಾವು ಸೇರಿಕೊಂಡ ಘಟನೆ ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನದಲ್ಲಿ ಘಟಿಸಿದ್ದು, ಇದರ ವಿಡಿಯೋ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ.
1.21 ನಿಮಿಷಗಳ ಈ ವಿಡಿಯೋದಲ್ಲಿ ಹೆಬ್ಬಾವು ರಸ್ತೆ ಮಧ್ಯೆ ಚಲಿಸುತ್ತಿದ್ದು, ಸಫಾರಿಗೆ ಹೊರಟಿದ್ದ ಪ್ರವಾಸಿಗರಿದ್ದ ಕಾರಿನ ಒಳಗೆ ಸೇರಿಕೊಂಡಿದೆ.
SBI ನೀಡ್ತಿರುವ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ದಕ್ಷಿಣ ಆಫ್ರಿಕಾದಲ್ಲಿ ಸದ್ಯ ಚಳಿಗಾಲವಿದ್ದು ವನ್ಯಜೀವಿಗಳು ಬೆಚ್ಚನೆಯ ವಾತಾವರಣ ಬಯಸಿ ರಸ್ತೆ ಮೇಲೆ ಬರುತ್ತವೆ. ಕಾರಿನ ಇಂಜಿನ್ ಬೆಚ್ಚಗಿರುವ ಕಾರಣ ಹೆಬ್ಬಾವು ಚಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಂಜಿನ್ನಲ್ಲಿ ಹೋಗಿ ಅಡಗಿ ಕುಳಿತಿದೆ. ಹಾವನ್ನು ರಕ್ಷಿಸಿ ಕಾಡಿಗೆ ಮರಳಿ ಬಿಡಲಾಗಿದೆ.