ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಗುತ್ತಿಗೆದಾರರಿಗೆ ಫಂಡಿಂಗ್ ಆಗಿರುವ ಆರೋಪ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಲೋಕೋಪಯೋಗಿ ಇಲಾಖೆಗೆ ನೋಟೀಸ್ ಜಾರಿ ಮಾಡಿದೆ.
ಗುತ್ತಿಗೆದಾರರು, ಬಿಲ್ಡರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ, ಪಾನ್ ಕಾರ್ಡ್, ಜಿಎಸ್ ಟಿ ನಂಬರ್, ಗುರುತಿನ ಚೀಟಿ ನೀಡುವಂತೆ ಸೂಚಿಸಿದೆ. ಆದರೆ ಐಟಿ ಕೇಳುತ್ತಿರುವ ಮಾಹಿತಿ ನೀಡಲು ಲೋಕೋಪಯೋಗಿ ಇಲಾಖೆ ಹಿಂದೇಟು ಹಾಕಿದೆ ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆದಾಯತೆರಿಗೆ ಇಲಾಖೆ ಲೋಕೋಪಯೋಗಿ ಇಲಾಖೆಗೆ ನೀಡುತ್ತಿರುವ ಮೂರನೇ ನೋಟೀಸ್ ಇದಾಗಿದೆ. ಇಲಾಖೆಯ ಎಲ್ಲಾ ಮುಖ್ಯ ಇಂಜಿನಿಯರ ಗಳಿಗೆ ಲೋಕೋಪಯೋಗಿ ಪ್ರಧಾನ ಕಾರದರ್ಶಿಯಿಂದ ಪತ್ರವನ್ನು ರವಾನಿಸಲಾಗಿದೆ. ಐಟಿ ಕೇಳುತ್ತಿರುವ ಎಲ್ಲಾ ಮಾಹಿತಿ ಒದಗಿಸುವಂತೆ ತಿಳಿಸಲಾಗಿದೆ.