alex Certify PWD ಎಂಜಿನಿಯರ್ ರಾಜೀವ್ ನಾಯ್ಕ್ ಮನೆ ಮೇಲೆ ACB ದಾಳಿ; 4.5 ಲಕ್ಷ ನಗದು, ಆಸ್ತಿ ಪತ್ರ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PWD ಎಂಜಿನಿಯರ್ ರಾಜೀವ್ ನಾಯ್ಕ್ ಮನೆ ಮೇಲೆ ACB ದಾಳಿ; 4.5 ಲಕ್ಷ ನಗದು, ಆಸ್ತಿ ಪತ್ರ ವಶಕ್ಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಪಿಡಬ್ಲ್ಯುಡಿ ಎಂಜಿನಿಯರ್ ರಾಜೀವ್ ನಾಯ್ಕ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಹಣ, ಆಸ್ತಿ ಪತ್ರ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ದಾಳಿ ವೇಳೆ ರಾಜೀವ್ ನಾಯ್ಕ್ ಗೆ ಸಂಬಂಧಿಸಿದ 4.5 ಲಕ್ಷ ಹಣ, 200 ಗ್ರಾಂ ಚಿನ್ನ, ಎರಡು ಐಷಾರಾಮಿ ಕಾರು ಹಾಗೂ ರಾಯಲ್ ಎನ್ ಫೀಲ್ಡ್ ಬೈಕ್, ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಆಗಿರುವ ರಾಜೀವ್ ನಾಯ್ಕ್, ಹೊನ್ನಾವರ, ಕಾರವಾರ ಹಾಗೂ ಬೆಂಗಳೂರಿನಲ್ಲಿ ಅಕ್ರಮವಾಗಿ ಸೈಟ್ ಗಳನ್ನು ಖರೀದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...