
ಬೆಂಗಳೂರು: ಸಿನಿಮಾ ಪ್ರದರ್ಶನ ಮಾಡುವ ಪಿವಿಆರ್ ಐನಾಕ್ಸ್ ಸಂಸ್ಥೆ ಆದಾಯಕ್ಕೆ ಬೇರೆ ದಾರಿ ಕಂಡುಕೊಂಡಿದ್ದು, ಐಪಿಎಲ್ ಪಂದ್ಯಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದೆ.
ಪ್ರಸ್ತುತ ದೇಶಾದ್ಯಂತ ಐಪಿಎಲ್ ಜ್ವರ ಜೋರಾಗಿದ್ದು, ಸದ್ಯಕ್ಕೆ ಹೊಸ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ದೊಡ್ಡ ಪರದೆಯ ಮೇಲೆ ಐಪಿಎಲ್ ಪಂದ್ಯ ಪ್ರದರ್ಶನ ಮಾಡಲು ಪಿವಿಆರ್ ಐನಾಕ್ಸ್ ಮುಂದಾಗಿದೆ. ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶದ 30ಕ್ಕೂ ಹೆಚ್ಚು ನಗರಗಳಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶವಿದ್ದು, ದೊಡ್ಡ ಪರದೆಯ ಮೇಲೆ ಕ್ರಿಕೆಟ್ ವೀಕ್ಷಿಸಿ ಹೊಸ ಅನುಭವ ಪಡೆಯಲು ಕ್ರಿಕೆಟ್ ಪ್ರೇಮಿಗಳಿಗೆ ಅವಕಾಶ ನೀಡಿದೆ.
ಈಗಾಗಲೇ ಉದ್ಘಾಟನಾ ಸಮಾರಂಭದ ಮ್ಯಾಚ್ ಲೈವ್ ಸ್ಟ್ರೀಮ್ ಮಾಡಲಾಗಿದೆ. ಇದೇ ರೀತಿ ವೀಕೆಂಡ್ ಮ್ಯಾಚ್, ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳ ಪ್ರದರ್ಶನಕ್ಕೆ ಪಿವಿಆರ್ ನಿರ್ಧರಿಸಿದೆ. ಇದಕ್ಕಾಗಿ ಬಿಸಿಎಸಿಐ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಈ ಮೊದಲು ಕೆಲವು ಪಂದ್ಯಗಳನ್ನು ಪಿವಿಆರ್ ಬಿಗ್ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಮಾಡಿದ್ದು, ಆಗ ಸಿನಿಮಾ ವಲಯದಿಂದ ವಿರೋಧ ವ್ಯಕ್ತವಾಗಿತ್ತು.